ADVERTISEMENT

ರಾಮನಗರ: ಸ್ಕೇಟಿಂಗ್‌ನಲ್ಲಿ ಡಿಂಪನ ಮಿಂಚು; ರಾಷ್ಟ್ರ, ರಾಜ್ಯ ಮಟ್ಟದಲ್ಲಿ 25 ಪದಕ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 7:04 IST
Last Updated 25 ಅಕ್ಟೋಬರ್ 2024, 7:04 IST
ಚಿನ್ನದ ಪದಕಗಳೊಂದಿಗೆ ಡಿಂಪನ
ಚಿನ್ನದ ಪದಕಗಳೊಂದಿಗೆ ಡಿಂಪನ   

ಮಾಗಡಿ: ತಾಲ್ಲೂಕಿನ ಗ್ರಾಮೀಣ ಪ್ರತಿಭೆ 11 ವರ್ಷದ ಡಿಂಪನ ಸ್ಕೇಟಿಂಗ್‌ನಲ್ಲಿ ಮಿಂಚುತ್ತಿದ್ದು, ಜಿಲ್ಲೆ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾಳೆ.

ತಾಲೂಕಿನ ವೀರೇಗೌಡನ ದೊಡ್ಡಿ ಗ್ರಾಮದ ನಿವಾಸಿ, ಎಎಸ್‌ಐ ಸಚ್ಚಿದಾನಂದಮೂರ್ತಿ‌ ಮತ್ತು ಹೇಮಲತಾ ದಂಪತಿ ಏಕೈಕ ಪುತ್ರಿ ಡಿಂಪನ ತಮ್ಮ ಸ್ಕೇಟಿಂಗ್‌ ಕೌಶಲದಿಂದ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.

ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಒಂದು ಬಾರಿ ಹಾಗೂ ರಾಜ್ಯಮಟ್ಟದಲ್ಲಿ ನಾಲ್ಕು ಬಾರಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ADVERTISEMENT

ಕರ್ನಾಟಕ, ದೆಹಲಿ, ರಾಜಸ್ಥಾನ, ಚಂಡಿಗಡ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ. ಇದುವರೆಗೆ 25ಕ್ಕಿಂತ ಹೆಚ್ಚು ಪದಕಗಳಿಗೆ ಕೊರಳೊಡಿದ್ದಾಳೆ.

ಕರ್ನಾಟಕ ರೋಲ‌ರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಕೇಟಿಂಗ್‌ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ರಾಷ್ಟ್ರಮಟ್ಟಕ್ಕೆ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಡಿಂಪನ ಮೂರು ವರ್ಷದಲ್ಲೇ ಸ್ಕೇಟಿಂಗ್‌ ಕಲಿಯಲು ಆರಂಭಿಸಿದರು. ತರಬೇತುದಾರರಾದ ಸುರೇಶ್ ಮತ್ತು ಯತೀಶ್ ಅವರು ಡಿಂಪನಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಸ್ಕೇಟಿಂಗ್ ಜೊತೆ ವಿದ್ಯಾಭ್ಯಾಸದಲ್ಲೂ ಮುಂದಿರುವ ಡಿಂಪನ 6 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಭವಿಷ್ಯದಲ್ಲಿ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆ ಹೊಂದುವ ಅಭಿಲಾಷೆ ಹೊಂದಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.