ADVERTISEMENT

ಕುದೂರು: ಮಣ್ಣಿಗನಹಳ್ಳಿ ಶಾಲೆ ಹಳೆ ವಿದ್ಯಾರ್ಥಿ ಸಂಘ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:20 IST
Last Updated 3 ಆಗಸ್ಟ್ 2024, 15:20 IST
ಕುದೂರು ಹೋಬಳಿಯ ಮಣ್ಣಿಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಗುರುವಂದನಾ ಕಾರ್ಯಕ್ರಮ ನಡೆಯಿತು
ಕುದೂರು ಹೋಬಳಿಯ ಮಣ್ಣಿಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಗುರುವಂದನಾ ಕಾರ್ಯಕ್ರಮ ನಡೆಯಿತು   

ಕುದೂರು: ಸ್ವಾತಂತ್ರ್ಯ ಹೋರಾಟಗಾರ ಬೆಳಗುಂಬ ನಾರಾಯಣಪ್ಪ ಅವರಿಂದ ಪ್ರಭಾವಿತರಾಗಿ ನಾರಸಂದ್ರ ಪಂಚಾಯಿತಿಯ ಮಣ್ಣಿಗನಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ಆರಂಭ ಮಾಡಿದ್ದೆವು ಎಂದು ನಿವೃತ್ತ ಶಿಕ್ಷಕ ನರಸಿಂಹಯ್ಯ ಸ್ಮರಿಸಿದರು.

ಹೋಬಳಿಯ ಮಣ್ಣಿಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಗುರುವಂದನೆ ಮತ್ತು ಹಳೆ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಶೃಂಗೇರಿ ವಿದ್ಯಾಪೀಠದ ಶಿವಗಂಗೆ ಶಾಖೆಯ ಸಚ್ಚಿದಾನಂದ ಗುರುಗಳು ಎರಡು ಎಕರೆ ಭೂಮಿಯನ್ನು ಗ್ರಾಮದಲ್ಲಿ ಶಾಲೆ ತೆರೆಯಲು ಉದಾರವಾಗಿ ದಾನ ಪತ್ರ ಬರೆದುಕೊಟ್ಟರು. ಇಂದು ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದಾರೆ ಎಂದರೆ ಅದು ಶೃಂಗೇರಿ ವಿದ್ಯಾಪೀಠಕ್ಕೆ ಸಲ್ಲುವ ಗೌರವ ಎಂದರು.

ADVERTISEMENT

ಮಾಗಡಿ ಕಸಾಪ ಅಧ್ಯಕ್ಷ ತಿ.ನಾ ಪದ್ಮನಾಭ ಮಾತನಾಡಿ, ಹಳೆ ವಿದ್ಯಾರ್ಥಿ ಸಂಘದಿಂದ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಶಾಲೆಯಲ್ಲಿ ಕ್ರಿಯಾತ್ಮಕ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜನೆ ಮಾಡಿ ಶಾಲೆಯ ಸಮತೋಲನವನ್ನು ಮತ್ತಷ್ಟು ಆರೋಗ್ಯಕರಗೊಳಿಸಲು ಸಹಕಾರಿಯಾಗಲಿ ಎಂದರು.

ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ಎಂ.ಆರ್ ರಾಮಸ್ವಾಮಿ ಮಾತನಾಡಿ, ಮಣ್ಣಿಗನಹಳ್ಳಿ ಶಾಲೆ ಆರಂಭವಾಗಿ 20 ವರ್ಷ ಕಳೆದಿದೆ. ಇಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಘಟಿಸಿ ಶಾಲೆಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ ಕನಿಷ್ಠ ಪಕ್ಷ ವರ್ಷಕ್ಕೆ ಮೂರು ಕಾರ್ಯಕ್ರಮವನ್ನು ಆಯೋಜಿಸುವ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ಮುಖ್ಯ ಶಿಕ್ಷಕರಾದ ರೇಣುಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಶಿಕ್ಷಕರಾದ ವಿಠ್ಠಲ್ ಸಕಲಾದಗಿ, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ, ಬಿ.ಎಲ್ ನಾರಾಯಣ್‌ರನ್ನು ವಿದ್ಯಾರ್ಥಿಗಳು ಗೌರವಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪರಿಸರ ಪ್ರೇಮ ಮತ್ತು ಮೂಖಾಭಿನಯದ ನಾಟಕ ಪ್ರದರ್ಶನ ನಡೆಯಿತು.

ಎಸ್‌ಡಿಎಂಸಿ ಅಧ್ಯಕ್ಷ ಗಂಗಗುಡ್ಡಯ್ಯ, ಬಾಲರಾಜು, ಚನ್ನಕೇಶ್ವ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಿಕ್ಕಣ್ಣ, ತಾಲ್ಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಟಿ.ಜಿ ದಯಾನಂದ ಮೂರ್ತಿ, ರೂಪ, ಎಂ.ಎಸ್ ಕಟ್ಟಿ, ಕವಿತಾ, ಕೃಷ್ಣಪ್ಪ, ಹಳೆ ವಿದ್ಯಾರ್ಥಿಗಳಾದ ಹನುಮಾಪುರ ಚೇತನ್, ಯತೀಶ್, ಶಿಲ್ಪ, ಚಿಕ್ಕಣ್ಣ, ಚೀಲೂರು ಚೇತನ್ ಕುಮಾರ್ ಹಾಗೂ 2016-17 ನೇ ಸಾಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.