ಕನಕಪುರ: ಕಸಬಾ ಹೋಬಳಿ ಕಲ್ಲಳ್ಳಿಯಲ್ಲಿ ಹಾಲಿನ ಡೇರಿ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಬಮೂಲ್ ಅಧ್ಯಕ್ಷ ರಾಜಕುಮಾರ್ ಬುಧವಾರ ನೆರವೇರಿಸಿದರು.
ಕಲ್ಲಳ್ಳಿ ಗ್ರಾಮದಲ್ಲಿ ಹಾಲಿನ ಡೇರಿಯು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡಕ್ಕಾಗಿ ನಿವೇಶನ ಖರೀದಿಸಲಾಗಿತು. ಈ ಜಾಗದಲ್ಲಿ ಸುಮಾರು ₹16 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಬಮೂಲ್ ಅಧ್ಯಕ್ಷ ರಾಜಕುಮಾರ್, ಮುಂದಿನ ದಿನಗಳಲ್ಲಿ ಹಾಲಿನ ಡೇರಿಗಳು ಆರ್ಥಿಕತೆ ಶಕ್ತಿ ಕೇಂದ್ರಗಳಾಗಲಿವೆ. ಒಂದು ಡೇರಿ ಬಂದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ. ಅದಲ್ಲದೆ ಬೇರೆ ಬೇರೆ ಅಭಿವೃದ್ಧಿಗಳು ಹಾಲಿನ ಡೇರಿಯಲ್ಲಿ ಆಗಲಿದ್ದು, ಅದಕ್ಕೆ ಅನುಗುಣವಾಗಿ ಕಟ್ಟಡವನ್ನು ರೂಪಿಸಿಕೊಳ್ಳಿ, ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಡೇರಿ ಕಾರ್ಯದರ್ಶಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಕೆ.ಶಿವನಂಜಯ್ಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಬಿ.ಪ್ರಕಾಶ್, ಬಮೂಲ್ ಶಿಬಿರ ಕಚೇರಿಯ ವ್ಯವಸ್ಥಾಪಕ ಪ್ರಕಾಶ್, ವಿಸ್ತರಣಾಧಿಕಾರಿ ಅರುಣ್, ಡೇರಿ ಅಧ್ಯಕ್ಷ ಕೆ.ಎಸ್. ರವಿಶಂಕರ್, ಮಾಜಿ ಅಧ್ಯಕ್ಷ ಕೃಷ್ಣ ಅರಸು (ಪ್ರಕಾಶ್) ನಿರ್ದೇಶಕರಾದ ಮುನಿರಾಜು ರಾಜಣ್ಣ, ಕೆ.ಟಿ.ನಾಗಯ್ಯ ಸಿದ್ದಯ್ಯ, ಕಬ್ಬಾಳಯ್ಯ, ವೆಂಕಟಮ್ಮ, ತಿಮ್ಮಮ್ಮ, ಶಿವಮ್ಮ, ಲಿಂಗರಾಜ ಅರಸು, ಶಿವಕುಮಾರ್, ಕೆ.ಪಿ.ಭೈರಯ್ಯ ಕಾರ್ಯದರ್ಶಿ ಚಂದ್ರೇಶ್, ಸಹಾಯಕರಾದ ವಿನಯ್, ಶ್ರೀನಿವಾಸ್, ಮರಿಯಣ್ಣ, ಮುನಿಸ್ವಾಮಿ, ಕೆ.ಟಿ.ಕುಮಾರ್, ಉಮೇಶ್, ಮಹೇಶ್ ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.