ADVERTISEMENT

ಕುದೂರು: ವಿಜೃಂಭಣೆಯಿಂದ ನಡೆದ ನರಸಿಂಹ ಜಯಂತಿ

​ಪ್ರಜಾವಾಣಿ ವಾರ್ತೆ
Published 24 ಮೇ 2024, 5:04 IST
Last Updated 24 ಮೇ 2024, 5:04 IST
ನರಸಿಂಹ ಜಯಂತಿಯ ಪ್ರಯುಕ್ತ ಕುದೂರು ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ನರಸಿಂಹ ಜಯಂತಿಯ ಪ್ರಯುಕ್ತ ಕುದೂರು ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.   

ಕುದೂರು: ಪಟ್ಟಣ ಮತ್ತು ಹೋಬಳಿಯಾದ್ಯಂತ ಬುಧವಾರ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪಟ್ಟಣದ ಪುರಾಣ ಪ್ರಸಿದ್ಧ ಲಕ್ಷ್ಮಿ ನರಸಿಂಹ  ದೇವಾಲಯದಲ್ಲಿ ಬುಧವಾರ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ಸುದರ್ಶನ ನಾರಸಿಂಹ ಹೋಮ, ಪೂರ್ಣಾಹುತಿ ನಂತರ ಪ್ರಾಕಾರ ಉತ್ಸವ, ಮಹಾ ಮಂಗಳಾರತಿ, ನೆರೆದಿದ್ದ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ದೇವಾಲಯದ ಸಮಿತಿ ವತಿಯಿಂದ ಮಾಡಲಾಗಿತ್ತು.

ಅದೇ ದಿನ ರಾತ್ರಿ ದೇವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ADVERTISEMENT

ಹೋಬಳಿಯ ಪುರಾಣ ಪ್ರಸಿದ್ಧ ಸುಗ್ಗನಹಳ್ಳಿ (ಶುಕಪುರಿ) ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಬುಧವಾರ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲಾಯಿತು. ದೇವರಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ನಡೆದ ಕೆಂಕೆರೆ ಪಾಳ್ಯ ಗ್ರಾಮದ ಜೈ ಶ್ರೀ ರಾಮ್ ಮಹಿಳಾ ಚಂಡೆ ವಾದ್ಯ ಮತ್ತು ಬೆಂಗಳೂರಿನ ನಾಟ್ಯಭೈರವಿ ನೃತ್ಯ ಶಾಲೆಯ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.