ADVERTISEMENT

ನರೇಗಾ ಕಾಮಗಾರಿ: ಕಾರ್ಮಿಕರಿಗೆ ಆರ್ಥಿಕ ಬಲ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 6:39 IST
Last Updated 13 ಜೂನ್ 2024, 6:39 IST
ಮಾಗಡಿ ತಾಲ್ಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ನಡೆದ ಲೆಕ್ಕ ಪರಿಶೋಧನಾ ಗ್ರಾಮ ಸಭೆ 
ಮಾಗಡಿ ತಾಲ್ಲೂಕಿನ ನೇತೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ನಡೆದ ಲೆಕ್ಕ ಪರಿಶೋಧನಾ ಗ್ರಾಮ ಸಭೆ    

ಮಾಗಡಿ : ಕೇಂದ್ರ ಸರ್ಕಾರದ ನರೇಗಾ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಆರ್ಥಿಕವಾಗಿ ಬಲ ನೀಡುತ್ತವೆ ಎಂದು ನೇತೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಿ ಹೇಳಿದರು.

ತಾಲೂಕಿನ ಚನ್ನಮ್ಮನಪಾಳ್ಯ ಗ್ರಾಮದಲ್ಲಿ ನೇತೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. 

ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಿದ ಸಮಯದಲ್ಲಿ ಕೆಲವು ನ್ಯೂನತೆ ಕಂಡು ಬಂದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವನ್ನು ಸರಿಪಡಿಸಬೇಕು ಎಂದು ನೋಡಲ್ ಅಧಿಕಾರಿ ಶಿವಕುಮಾರ್ ಹೇಳಿದರು.

ನೇತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿ ನಡೆದ ಕೆಲವು ಕಾಮಗಾರಿಗಳನ್ನು ಅಳತೆ ಪುಸ್ತಕದಲ್ಲಿ ನಮೂದಿಸಿಲ್ಲ. ಕೆಲವಕ್ಕೆ ಚೆಕ್ಮೆಟ್ ಮಾಡಿಸಿಲ್ಲ. ಇನ್ನು ಕೆಲವು ಕಾಮಗಾರಿಗಳ ಅಳತೆ ಕಡಿಮೆ ಬಂದಿರುವುದು ಕಂಡು ಬಂದಿದೆ. ಕೆಲವು ಕಡೆಗಳಲ್ಲಿ 1000 ಲೀಟರ್ ನೀರಿನ ಟ್ಯಾಂಕ್ ಬದಲು 500 ಲೀಟರ್ ಟ್ಯಾಂಕ್ ಅಳವಡಿಸಿರುವುದು ಕಂಡು ಬಂದಿದೆ. ಇವನ್ನು ಶೀಘ್ರ  ಸರಿಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶಿವಮ್ಮ ಸೂಚಿಸಿದರು.

ADVERTISEMENT

ನೇತೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ವರಲಕ್ಷ್ಮಮ್ಮ, ಸದಸ್ಯರಾದ ಲಕ್ಷ್ಮಮ್ಮ, ಪ್ರಕಾಶ್, ಪಿಡಿಒ ಎಸ್.ರಾಕೇಶ್, ಕಾರ್ಯದರ್ಶಿ ಕೆ. ಹನುಮಂತರಾಜು, ಬಿಲ್ ಕಲೆಕ್ಟರ್ ನಾಗರಾಜು, ನಾರಾಯಣಪ್ಪ, ಭರತ್‌ ಕುಮಾರ್‌, ದೊಡ್ಡರಂಗಯ್ಯ, ದಿವಾಕರ್, ಸತೀಶ್, ಗೀರಿಶ್, ಜೀತೇಂದ್ರಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.