ADVERTISEMENT

ಆನೇಕಲ್: ಕತ್ರಿಗುಪ್ಪೆಯಲ್ಲಿ ನವಜಾತ ಶಿಶು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 16:12 IST
Last Updated 1 ಅಕ್ಟೋಬರ್ 2024, 16:12 IST
<div class="paragraphs"><p>ಮಣ್ಣಿನಲ್ಲಿ ಹೂತುಹಾಕಿರುವ ನವಜಾತ ಶಿಶು</p></div>

ಮಣ್ಣಿನಲ್ಲಿ ಹೂತುಹಾಕಿರುವ ನವಜಾತ ಶಿಶು

   

ಆನೇಕಲ್: ನವಜಾತ ಶಿಶುವೊಂದನ್ನು ಲಾರಿ ಚಾಲಕರು ಗಮನಿಸಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ನವಜಾತ ಶಿಶುವನ್ನು ರಕ್ಷಿಸಲಾಗಿದೆ. ತಾಲ್ಲೂಕಿನ ನೆರಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕತ್ರಿಗುಪ್ಪೆ ದಿಣ್ಣೆಯಲ್ಲಿ ಮಗು ಪತ್ತೆಯಾಗಿದೆ.

ಕತ್ರಿಗುಪ್ಪೆ ದಿಣ್ಣೆ ನೀಲಗಿರಿ ತೋಪಿನಲ್ಲಿ ನವಜಾತ ಗಂಡು ಶಿಶುವೊಂದನ್ನು ಮಣ್ಣಿನಲ್ಲಿ ಹೂತು ಹಾಕಿದ್ದನ್ನು ಲಾರಿ ಚಾಲಕರು ಗಮನಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ, ಶಿಶುವನ್ನು ಸಂರಕ್ಷಿಸಿ ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಗೆ ದಾಖಲಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತಂದು ಮುಂದಿನ ಪಾಲನೆ, ಪೋಷಣೆಗೆ ಮತ್ತು ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ವಾಣಿವಿಲಾಸ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.