ADVERTISEMENT

ನಿಖಿಲ್ ಪೊಲೀಸರು ನಡುವೆ ತಳ್ಳಾಟ, ಮಾತಿನ ಚಕಮಕಿ: ಪ್ರವೇಶದ್ವಾರದ ಗಾಜು ಪುಡಿ

ಸಹಕಾರ ಸಂಘಗಳ ಉಪ ನಿಬಂಧಕರ‌ ಕಚೇರಿಗೆ ನಿಖಿಲ್ ನೇತೃತ್ವದಲ್ಲಿ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 7:39 IST
Last Updated 9 ಜುಲೈ 2024, 7:39 IST
<div class="paragraphs"><p>ನಿಖಿಲ್ ಪೊಲೀಸರು ನಡುವೆ ತಳ್ಳಾಟ</p></div>

ನಿಖಿಲ್ ಪೊಲೀಸರು ನಡುವೆ ತಳ್ಳಾಟ

   

ರಾಮನಗರ: ತಾಲ್ಲೂಕಿನ ಹಳ್ಳಿಮಾಳ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ದಿಢೀರ್ ರದ್ದುಪಡಿಸಿರುವುದನ್ನು ಖಂಡಿಸಿ, ಜೆಡಿಎಸ್–ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಯುವ ಘಟಕದ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಇಲ್ಲಿನ ಕಂದಾಯ ಭವನದ ಪ್ರವೇಶದ್ವಾರಕ್ಕೆ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ ಗಳನ್ನು ಸರಿಸಿ ನಿಖಿಲ್ ಹಾಗೂ ಮುಖಂಡರು ಒಳ ನುಗ್ಗಲು ಮುಂದಾದರು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದರೂ ಬ್ಯಾರಿಕೇಡ್ ತಳ್ಳಿ ಮುಂದೆ ಬಂದರು. ಆಗ ಪೊಲೀಸರನ್ನು ಹಿಂದಕ್ಕೆ ನೂಕಿದರು. ಆಗ ಸಂಭವಿಸಿದ ನೂಕುನುಗ್ಗಲಿನಲ್ಲಿ ಪ್ರವೇಶದ್ವಾರದ ಗಾಜು ಒಡೆದು ಪುಡಿಯಾಯಿತು.

ADVERTISEMENT

ತಳ್ಳಾಟದಲ್ಲಿ ನಿಖಿಲ್ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಡಿವೈಎಸ್ಪಿ ದಿನಕರ ಶೆಟ್ಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಖಿಲ್ ಅವರನ್ನು ಸಮಾಧಾನಪಡಿಸಿದರು. ಪೊಲೀಸರರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿಖಿಲ್ ಕಂದಾಯ ಭವನದ ಪ್ರವೇಶದ್ವಾರದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.