ರಾಮನಗರ: ಭಾರತದಿಂದ ಪಲಾಯನ ಮಾಡಿ 'ಕೈಲಾಸ’ ರಾಷ್ಟ್ರ ಸ್ಥಾಪಿಸಿಕೊಂಡಿರುವ ನಿತ್ಯಾನಂದ ಸ್ವಾಮೀಜಿ ಇದೀಗ ತನ್ನ ಹೊಸ ದೇಶದ ಹೊಸ ಕರೆನ್ಸಿಯನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ಕಳೆದ ಗಣೇಶ ಚತುರ್ಥಿಯೆಂದೇ ಈ ಬಿಡುಗಡೆ ಕಾರ್ಯ ನಡೆದಿದೆ. ಹೊಸ ಕರೆನ್ಸಿಗೆ 'ಕೈಲಾಶಿಯನ್ ಡಾಲರ್’ ಎಂದು ಕರೆಯಲಾಗಿದೆ.56 ಹಿಂದೂ ದೇಶಗಳ ಅರ್ಥ ವ್ಯವಸ್ಥೆಯಲ್ಲಿನ ಪ್ರೇರಣೆಯಿಂದ ಇದನ್ನು ವಿನ್ಯಾಸಗೊಳಿಸಿರುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾರೆ.
ಸುಮಾರು ಏಳು ಬಗೆಯ ಕರೆನ್ಸಿಗಳನ್ನು ಇದು ಒಳಗೊಂಡಿದ್ದು, ಅರ್ಧ ಡಾಲರ್‌ನಿಂದ ಹಿಡಿದು10 ಡಾಲರ್‌ವರೆಗೆ ಇವುಗಳ ಮೌಲ್ಯವಿದೆ. ಕರೆನ್ಸಿಯ ಒಂದು ಭಾಗದಲ್ಲಿ ತಮಿಳು ಭಾಷೆ ಸಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.