ADVERTISEMENT

ಕನಕಪುರ | ಸೇವಾ ಮನೋಭಾವಕ್ಕೆ ಎನ್‌ಎಸ್ಎಸ್‌ ಸಹಕಾರಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 5:24 IST
Last Updated 28 ಅಕ್ಟೋಬರ್ 2023, 5:24 IST
ಕನಕಪುರ ತಿಗಳರ ಹೊಸಳ್ಳಿ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ವೇಣುಗೋಪಾಲ್‌ ಮಾತನಾಡಿದರು
ಕನಕಪುರ ತಿಗಳರ ಹೊಸಳ್ಳಿ ಗ್ರಾಮದಲ್ಲಿ ನಡೆದ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರದಲ್ಲಿ ವೇಣುಗೋಪಾಲ್‌ ಮಾತನಾಡಿದರು   

ಕನಕಪುರ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಮನೋಭಾವ ಬೆಳಸಿಕೊಳ್ಳಲು ಹಾಗೂ ಸಾರ್ವಜನಿಕವಾಗಿ ಗ್ರಾಮೀಣ ಪ್ರದೇಶದ ಜನರನ್ನು ಜಾಗೃತಿಗೊಳಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೇಣುಗೋಪಾಲ್‌ ತಿಳಿಸಿದರು.

ಕಸಬಾ ಹೋಬಳಿ ತಿಗಳರ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಪ್ರಾರಂಭವಾದ  ಕಾಲೇಜಿನ ಎನ್‌ಎಸ್‌ಎಸ್‌ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಸಾಮಾಜಿಕ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಈ ಶಿಬಿರಗಳು ಸಹಕಾರಿ ಆಗಲಿವೆ. ಹಳ್ಳಿ ಜನರ ನಡುವೆ 8 ದಿನಗಳ ವಿದ್ಯಾರ್ಥಿಗಳು ಕೆಲಸ ಮಾಡುವುದರಿಂದ ಅವರೊಟ್ಟಿಗೆ ಬೆರೆಯುವುದರಿಂದ ಅವರ ಕಷ್ಟ–ಸುಖಗಳ ಬಗ್ಗೆ ತಿಳಿಯಲಿದೆ ಎಂದರು.‌

ADVERTISEMENT

ಗ್ರಾಮೀಣ ಜನರು ತಮ್ಮ ಮನೆ, ಹೊಲಗದ್ದೆಗಳನ್ನು ಮಾತ್ರ ಅಚ್ಚುಕಟ್ಟು ಮಾಡಿಕೊಳ್ಳುತ್ತಾರೆ., ಆದರೆ ಗ್ರಾಮ ಮತ್ತು ರಸ್ತೆ, ಚರಂಡಿ, ಶಾಲೆ, ದೇವಸ್ಥಾನದ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಅದು ನಮ್ಮದಲ್ಲ ಎಂಬ ಮನೋಭಾವ. ಅಂತಹ ಮನೋಭಾವ ಬಿಡಬೇಕು. ಗ್ರಾಮವು ಸ್ವಚ್ಛವಾಗಿದ್ದರೆ ಗ್ರಾಮದ ಜನರು ಆರೋಗ್ಯವಾಗಿರುತ್ತಾರೆ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.