ADVERTISEMENT

ಬಿಡದಿ | ಸರ್ಕಾರಿ ಶಾಲೆ ಮಕ್ಕಳಿಗೆ ಕಾಗದ ಕಲೆ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 15:15 IST
Last Updated 11 ಆಗಸ್ಟ್ 2024, 15:15 IST
ಬಣ್ಣದ ಕಾಗದಗಳಿಂದ ತಯಾರಿಸಿದ ಕಲಾಕೃತಿಗಳೊಂದಿಗೆ ಸರ್ಕಾರಿ ಶಾಲೆಯ ಮಕ್ಕಳು 
ಬಣ್ಣದ ಕಾಗದಗಳಿಂದ ತಯಾರಿಸಿದ ಕಲಾಕೃತಿಗಳೊಂದಿಗೆ ಸರ್ಕಾರಿ ಶಾಲೆಯ ಮಕ್ಕಳು    

ಬಿಡದಿ: ಹೆಗ್ಗಡಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶನಿವಾರ ಸಾಂಝಿ ಕಾಗದ ಕಲೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.

ರಾಬರ್ಟ್ ಬಾಷ್‌ ಕಂಪನಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ 30ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. 

ಮೈಸೂರಿನ ಕಲಾವಿದ ಎಸ್. ಎಫ್. ಹುಸೇನಿ ಅವರು ಬಣ್ಣದ ಕಾಗದಗಳಿಂದ ವಿವಿಧ ರೀತಿಯ ಆಕೃತಿ ಮಾಡುವುದನ್ನು ಮಕ್ಕಳಿಗೆ ಕಲಿಸಿಕೊಟ್ಟರು.   

ADVERTISEMENT

ಬಣ್ಣದ ಕಾಗದ ಹಾಗೂ ಕತ್ತರಿಯಲ್ಲಿ ಮೂಡುವ ಕಲೆಯಿಂದ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚುತ್ತದೆ ಕಾಗದದ ಕತ್ತರಿ ಕಲೆಯಲ್ಲಿ ಅತಿ ಹೆಚ್ಚು ಬೆರಳು ಬಳಕೆಯಾಗುತ್ತದೆ. ಇದರಿಂದಾಗಿ ಬೆರಳುಗಳಿಗೂ ಚಾಲನೆ ಸಿಗುತ್ತದೆ. ಮಿದುಳು ಚುರುಕಾಗುತ್ತದೆ. ಕಾಗದವನ್ನು ಮಡಚಿ ಕತ್ತರಿಸುವುದರಿಂದ ತ್ರಿಭುಜ, ಆಯತ, ಚೌಕಕಾರ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಸಾಂಝಿ ಕಲಾವಿದ ಹುಸೇನಿ ತಿಳಿಸಿದರು.

ಶಿಕ್ಷಕರು ಹಾಗೂ ಬಾಷ್‌ ಕಂಪನಿಯ ಉದ್ಯೋಗಿಗಳು ಮತ್ತು ಆಸರೆ ತಂಡದ ಸದಸ್ಯರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.