ADVERTISEMENT

ಮಾಗಡಿ | ನೆಲಮಂಗಲಕ್ಕೆ ಸೋಲೂರು ಸೇರ್ಪಡೆ ಬೇಡ: ವಕೀಲರ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 6:56 IST
Last Updated 25 ಅಕ್ಟೋಬರ್ 2024, 6:56 IST
ಮಾಗಡಿ ಪಟ್ಟಣದ ತಾಲೂಕು ವಕೀಲರ ಸಂಘದಿಂದ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿಸದಂತೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ಅಧ್ಯಕ್ಷ  ಆರ್. ಸುರೇಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು. ಮಾಜಿ ಅಧ್ಯಕ್ಷ ಜಿ.ಪಾಪಣ್ಣ, ಕಾರ್ಯದಶರ್ಿ ಎಚ್.ಅನಿಲ್ ಕುಮಾರು, ನಾರಾಯಣಸ್ವಾಮಿ ಇದ್ದರು.
ಮಾಗಡಿ ಪಟ್ಟಣದ ತಾಲೂಕು ವಕೀಲರ ಸಂಘದಿಂದ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿಸದಂತೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ಅಧ್ಯಕ್ಷ  ಆರ್. ಸುರೇಶ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರು. ಮಾಜಿ ಅಧ್ಯಕ್ಷ ಜಿ.ಪಾಪಣ್ಣ, ಕಾರ್ಯದಶರ್ಿ ಎಚ್.ಅನಿಲ್ ಕುಮಾರು, ನಾರಾಯಣಸ್ವಾಮಿ ಇದ್ದರು.   

ಮಾಗಡಿ: ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಬಾರದೆಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನಾ ಪಾದಯಾತ್ರೆ ನಡೆಸಲಾಯಿತು.

ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಲಯದ ಆವರಣದಿಂದ ತಾಲ್ಲೂಕು ಕಚೇರಿ ವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಸೋಲೂರು ಹೋಬಳಿ ನೆಲಮಂಗಲ ಕ್ಷೇತ್ರಕ್ಕೆ ಸೇರ್ಪಡೆಗೆ ಬಿಡುವುದಿಲ್ಲ. ಸೋಲೂರು ಹೋಬಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇವೆ’  ಪ್ರತಿಭಟನನಿರತ ವಕೀಲರು ಘೋಷಣೆ ಕೂಗಿದರು.

ADVERTISEMENT

ಹಲವು ವರ್ಷಗಳಿಂದಲೂ ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲಿದೆ. ಈಗ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಲು ಕೆಲ ಪಟ್ಟಭದ್ರಹಿತಾಶಕ್ತಿಗಳು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಿಂದ ಒಂದೊಂದೇ ಹೋಬಳಿಗಳು ಕಳಚಿಕೊಂಡರೆ ಮುಂದೆ ಮಾಗಡಿ ತಾಲ್ಲೂಕು ಭೂಪಟದಿಂದಲೇ ಕಣ್ಮರೆಯಾಗುತ್ತದೆ. ಮಾಗಡಿಯಿಂದ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದರೆ ಕಂದಾಯ ಇಲಾಖೆಯೂ ಅರ್ಧ ನೆಲಮಂಗಲಕ್ಕೆ ಹೋದರೆ ವಕೀಲರಿಗೆ ಕೆಲಸ ಇರುವುದಿಲ್ಲ. ಮಾಗಡಿ ವಿಧಾನಸಭಾ ಕ್ಷೇತ್ರದ ಕೂಟಗಲ್ಲು, ಬಿಡದಿ ಹೋಬಳಿ ಕಂದಾಯ ಇಲಾಖೆ ವ್ಯಾಪ್ತಿ ರಾಮನಗರಕ್ಕೆ ನೀಡಿದ್ದಾರೆ. ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಆರ್. ಸುರೇಶ್ ಹೇಳಿದರು.

ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ತಾಲ್ಲೂಕು ವಕೀಲ ಸಂಘದಿಂದ ತೀವ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಅಲ್ಲಿನ ಸುಮಾರು 40 ರಷ್ಟು ಪ್ರಕರಣಗಳು ಮಾಗಡಿ ನ್ಯಾಯಾಲಯಕ್ಕೆ ಬರುತ್ತಿದೆ. ಮಾಗಡಿಯಲ್ಲಿ ಸುಮಾರು 160 ಮಂದಿ ವಕೀಲರಿದ್ದು, ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದರೆ ಸೋಲೂರಿನ ಪ್ರಕರಣಗಳು ನೆಲಮಂಗಲದ ನ್ಯಾಯಾಲಯಕ್ಕೆ ಹೋಗಲಿವೆ. ಇದರಿಂದ ವಕೀಲರಿಗೆ ತೊಂದರೆ ಉಂಟಾಗುತ್ತದೆ. ಜತೆಗೆ ಸೋಲೂರು ಹೋಬಳಿಯ ಕಡೆಯ ಗ್ರಾಮ ಬಾಣವಾಡಿ ಮಾಗಡಿಗೆ 13 ಕಿಲೋಮೀಟರ್ ಇರುವುದರಿಂದ ಮಾಗಡಿಯಲ್ಲೇ ಸೋಲೂರನ್ನು ಉಳಿಸಿದರೆ ನಾಗರಿಕರಿಗೆ ಅನುಕೂಲವಾಗುತ್ತದೆ ಎಂದು ಸಂಘದ ಮಾಜಿ ಅಧ್ಯಕ್ಷ ಜಿ.ಪಾಪಣ್ಣ ತಿಳಿಸಿದರು.

ಈ ಸಂಬಂಧ ಕ್ಷೇತ್ರದ ಶಾಸಕ ಮತ್ತು ಸಂಸದರಿಗೂ ಮನವಿ ಸಲ್ಲಿಸಲಾಗುವುದು.  ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಎಚ್.ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಸಹನಾ ಪಂಡಿತ್, ಎಂ.ಎಚ್.ವಿಜಯ್ ಕುಮಾರ್, ಕೆ.ಎಸ್. ಪ್ರಕಾಶ್, ಎಚ್. ನಾರಾಯಣಸ್ವಾಮಿ, ಎಂ.ಚೇತನ್, ಭಾರತಿ, ರಮ್ಯ, ಎ.ನರಸಿಂಹಮೂರ್ತಿ, ನವೀನ್ ಕುಮಾರ್, ಸಿದ್ದರಾಜು, ಸಿದ್ದಲಿಂಗಪ್ಪ, ರವೀಂದ್ರ ಕುಮಾರ್ ಚನ್ನಕೇಶವ, ಕಿರಣ್, ಸಿದ್ದರಾಜು, ನಾಗರಾಜು, ರಾಜಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.