ADVERTISEMENT

ಆಹಾ...! ಮುದ್ದೆ ಉಪ್ಸಾರು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 4:53 IST
Last Updated 7 ಜುಲೈ 2024, 4:53 IST
<div class="paragraphs"><p>ಕೆನರಾ ಫುಡ್ ಸೆಂಟರ್ ಹೋಟೆಲ್ ನ ಉಪ್ಸಾರು ಮುದ್ದೆ</p></div>

ಕೆನರಾ ಫುಡ್ ಸೆಂಟರ್ ಹೋಟೆಲ್ ನ ಉಪ್ಸಾರು ಮುದ್ದೆ

   

ಹಾರೋಹಳ್ಳಿ: ಪಟ್ಟಣದಲ್ಲಿ 19 ವರ್ಷಗಳಿಂದ ಗುಣಮಟ್ಟದ ಆಹಾರ ಜತೆಗೆ ಶುದ್ಧತೆಗೆ ಹೆಸರಾಗಿರುವ ಕೆನರಾ ಫುಡ್ ಸೆಂಟರ್ ಹೋಟೆಲ್ ನಿತ್ಯವೂ ನೂರಾರು ಗ್ರಾಹಕರನ್ನು ಸೆಳೆಯುತ್ತಿದೆ.

ಹಾರೋಹಳ್ಳಿ ತಾಲ್ಲೂಕು ಕೇಂದ್ರದಲ್ಲಿರುವ ಒಂದು ಉತ್ತಮ ಹೋಟೆಲ್‌ ಎಂಬ ಹೆಸರು ಪಡೆದಿದೆ. ಪಟ್ಟಣ ಸೇರಿದಂತೆ ಹೊರ ಊರುಗಳಿಂದ ಬಂದವರಿಗೆ ಹೊರೆಯಾಗದಂತೆ ಊಟ, ತಿಂಡಿ ಜತೆಗೆ ಇಡ್ಲಿ, ಚಿತ್ರಾನ್ನ, ಮುದ್ದೆ ಉಪ್ಸಾರು, ಸೊಪ್ಪಿನ ಪಲ್ಯ, ಅನ್ನ–ಸಾಂಬಾರ್‌ ಇತರ ಆಹಾರ ಪದಾರ್ಥ ಕೆನರಾ ಫುಡ್‌ ಸೆಂಟರ್ ಹೋಟೆಲ್‌ನಲ್ಲಿ ಲಭ್ಯ.

ADVERTISEMENT

ಕೆನರಾ ಫುಡ್ ಸೆಂಟರ್ ಹೋಟೆಲ್ ನಲ್ಲಿ ಗ್ರಾಹಕರು ಆಹಾರ ಸವಿಯುತ್ತಿರುವುದು

ಹೋಟೆಲ್‌ ಸದಾ ಕಾಲ ಗ್ರಾಹಕರಿಂದ ತುಂಬಿರುತ್ತದೆ. ಮಧ್ಯಾಹ್ನ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಹೋಟೆಲ್‌ನಲ್ಲಿ ಮುದ್ದೆ– ಉಪ್ಸಾರು ರುಚಿ ಸವಿಯಲು ಆಹಾರ ಪ್ರಿಯರು ಇತ್ತ ಬರುತ್ತಾರೆ. ‌

ಕುಶಾಲ್ ಮಾಲೀಕತ್ವದಲ್ಲಿ ಹೋಟೆಲ್ 19 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅವರಿಗೆ ಪತ್ನಿ ಪ್ರೇಮ ಕೂಡ ಕೈ ಜೋಡಿಸಿದ್ದಾರೆ. ಕಾಲಕ್ಕೆ ತಕ್ಕಂತೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಸಸ್ಯಹಾರ ಸಿದ್ಧಪಡಿಸಿ ಗ್ರಾಹಕರಿಗೆ ಉಣಬಡಿಸಲಾಗುತ್ತಿದೆ. ನಿಯಮಾವಳಿ  ಪ್ರಕಾರ ದರ ಪಡೆಯಲಾಗುತ್ತಿದೆ.

ಗ್ರಾಹಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ ನಿರ್ವಹಣೆಗೂ ಆದ್ಯತೆ ಕೊಟ್ಟಿದ್ದಾರೆ. ‘ಗ್ರಾಹಕ ನೀಡುವ ಹಣಕ್ಕೆ ಮೋಸವಾಗದಂತೆ ಸೇವೆ ನೀಡುವುದೇ ಗುರಿಯಾಗಿದೆ. ಪ್ರಸ್ತುತ ದರದಲ್ಲಿ ಗುಣಮಟ್ಟದ ಆಹಾರ ನೀಡುವುದು ಕಷ್ಟವಾಗಿದ್ದರೂ, ಉತ್ತಮ ಗುಣಮಟ್ಟದ ದಿನಸಿ ಪದಾರ್ಥ ಬಳಸಿ ನೀಡಲಾಗುತ್ತಿದೆ’ ಎಂದು ಕುಶಾಲ್ ಪ್ರತಿಕ್ರಿಯಿಸಿದರು.

‘ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆ ಜನರು ಕೆನರಾ ಪುಡ್ ಸೆಂಟರ್ ಹೋಟೆಲ್‌ನತ್ತ ಬರುತ್ತಾರೆ. ರುಚಿಕರವಾದ ಕಾಫಿ ತಿಂಡಿ, ಊಟ, ಜನರಿಗೆ ಲಭ್ಯವಾಗಿದೆ’ ಎಂದು ಗ್ರಾಹಕ ಮೋಹನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.