ADVERTISEMENT

ರಾಮನಗರ | ದೇಗುಲದ ಹೆಸರಿನಲ್ಲಿ ಅನಧಿಕೃತ ಟ್ರಸ್ಟ್: ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 5:25 IST
Last Updated 2 ಜುಲೈ 2024, 5:25 IST
ರಾಮನಗರದ ಮಂಡೀಪೇಟೆ, ಕರಗದಬೀದಿ, ತಿಗಳಬೀದಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ತಹಶೀಲ್ದಾರ್ ತೇಜಸ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ರಾಮನಗರದ ಮಂಡೀಪೇಟೆ, ಕರಗದಬೀದಿ, ತಿಗಳಬೀದಿ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ತಹಶೀಲ್ದಾರ್ ತೇಜಸ್ವಿನಿ ಅವರಿಗೆ ಮನವಿ ಸಲ್ಲಿಸಿದರು.   

ರಾಮನಗರ: ನಗರದ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯದ ಹೆಸರಿನಲ್ಲಿ ಕೆಲವರು ಅನಧಿಕೃತವಾಗಿ ಟ್ರಸ್ಟ್ ರಚಿಸಿಕೊಂಡು ಕರಗ ಹಬ್ಬ ಆಚರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿ ನಗರದ ಮಂಡೀಪೇಟೆ, ಕರಗದಬೀದಿ, ತಿಗಳಬೀದಿ, ರಾಘವೇಂದ್ರಕಾಲೋನಿ ಮತ್ತಿತರ ಸುತ್ತಮುತ್ತಲಿನ ನಿವಾಸಿಗಳು ಹಾಗೂ ವರ್ತಕರು ತಹಶೀಲ್ದಾರ್ ತೇಜಸ್ವಿನಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ರಾಮನಗರದ ಮಂಡಿಪೇಟೆಯಲ್ಲಿ ಬನ್ನಿ ಮಹಾಂಕಾಳಿ ಅಮ್ಮನವರ ದೇವಾಲಯ ಮುಜರಾಯಿ ವ್ಯಾಪ್ತಿಗೆ ಒಳಪಟ್ಟಿದೆ. ಭಕ್ತಾದಿಗಳು ಹಾಗೂ ಸುತ್ತ ಮುತ್ತಲಿನವರಿಗೆ ಯಾವುದೇ ಮಾಹಿತಿ ನೀಡದೆ, ತಹಶೀಲ್ದಾರ್ ಅವರ ಗಮನಕ್ಕೂ ತಾರದೆ ರಾಮನಗರ ಉಪನೋಂದಣಿ ಕಚೇರಿಯಲ್ಲಿ ಶ್ರೀ ಕೊಳಗದ ಮಾರಮ್ಮ ನಗರ ದೇವತೆ ಬನ್ನಿ ಮಹಾಂಕಾಳಿ ಅಮ್ಮನವರ ಕಗರ ಮಹೋತ್ಸವ ಹಾಗೂ ಅನ್ನ ಸಂತರ್ಪಣೆ ಸೇವಾ ಟ್ರಸ್ಟ್ ಹೆಸರಿನಲ್ಲಿ ಕೆಲವರು ಟ್ರಸ್ಟ್ ರಚಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ದೇವಾಲಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಸ್ಥಳೀಯರೊಡಗೂಡಿ ಕರಗ ಆಚರಣೆ ಮಾಡಬೇಕಿದೆ. ಕೆಲವರು ರಚಿಸಿಕೊಂಡಿರುವ ಟ್ರಸ್ಟ್ ನ ಪದಾಧಿಕಾರಿಗಳಿಗೆ ಈ ಬಾರಿಯ ಕರಗ ಮಹೋತ್ಸವ ಮತ್ತು ಅನ್ನಸಂಪರ್ಪಣೆ ಹಾಗೂ ದೇವಾಲಯದ ಪೂಜೆ ಕೈಂಕರ್ಯಗಳಿಗೆ ಅನುಮತಿ ನೀಡಬಾರದು. ಈ ಟ್ರಸ್ಟ್ ಅನ್ನು ರದ್ದುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ನಿವಾಸಿಗಳಾದ ದೀಪು, ರಾಜು, ದೀಪಕ್, ಭಾರತಿ, ಶಶಿ, ಶಿವಸ್ವಾಮಿ, ರಾಜು, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.