ಕುದೂರು: ದೀಪೋತ್ಸವ ಮನುಷ್ಯನ ಪರಿವರ್ತನೆಗೆ ನಾಂದಿ ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸೋಲೂರು ಹೋಬಳಿ ಕಂಚುಗಲ್ ಬಂಡೇಮಠದಲ್ಲಿ ಭಾನುವಾರ ನಡೆದ ಕಾರ್ತಿಕ ಮಾಸದ ದೀಪೋತ್ಸವ ಮತ್ತು ಧಾರ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ತಿಕ ದೀಪದಂತೆ ಮನುಷ್ಯನ ಬದುಕಿನಲ್ಲಿರುವ ಸಂಪೂರ್ಣ ಕತ್ತಲೆ ತೊಳೆದು ಪ್ರತಿಯೊಬ್ಬರಲ್ಲೂ ಹೊಸ ಭರವಸೆ ಮೂಡುತ್ತದೆ. ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಸಾಂಕೇತಿಕವಷ್ಟೇ. ಆದರೆ, ಮನುಷ್ಯನ ಬದುಕಿನಲ್ಲಿ ಬೆಳಕು ತಂದುಕೊಳ್ಳಬೇಕು ಎಂದರು.
ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಕಾರ್ಯಕ್ರಮ ತನ್ನದೆ ವೈಶಿಷ್ಟ್ಯತೆ ಪಡೆದಿದೆ. ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯ ಬದುಕಲು ಶಾಂತಿ ಅವಶ್ಯವಾಗಿದೆ. ಸುಖ–ಶಾಂತಿ ಬಯಸುವ ಮನುಷ್ಯ, ಆ ದಾರಿಯಲ್ಲಿ ನಡೆಯಬೇಕಾಗುತ್ತದೆ ಎಂದರು.
ಕಂಚುಗಲ್ ಬಂಡೇಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಭೌತಿಕ ಸಂಪತ್ತು ಬೆಟ್ಟದಷ್ಟಿದ್ದರೂ ಶಾಶ್ವತವಲ್ಲ. ಸತ್ಯ ಧರ್ಮವೇ ನಿಜವಾದ ಸಂಪತ್ತು. ಆಧ್ಯಾತ್ಮ ಚಿಂತನೆ, ಶಾಂತಿ ನೆಮ್ಮದಿ ಮೂಲ ಎಂದರು.
ಸಿದ್ದಗಂಗಾ ಮಠದ ಕಿರಿಯ ಶಿವಸಿದ್ದೇಶ್ವರ ಸ್ವಾಮೀಜಿ, ವಿಜಯಪುರದ ಬಸವ ಕಲ್ಯಾಣ ಮಠದ ಕಿರಿಯ ಸದಾಶಿವ ಸ್ವಾಮೀಜಿ, ಗುರುವಣ್ಣದೇವರ ಮಠದ ನಂಜುಂಡ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಗದ್ದುಗೆ ಮಠದ ಮಹಂತ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಸ್ವಾಮೀಜಿ, ಗುಮ್ಮಸಂದ್ರ ಮಠದ ಚಂದ್ರಶೇಖರ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಬಿಎಂಟಿಸಿ ಮಾಜಿ ನಿರ್ದೇಶಕ ಭೃಂಗೇಶ್, ಹರ್ತಿ ಸಿದ್ದಪ್ಪ, ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ತಟ್ಟೇಕೆರೆ ಶರ್ಮ, ರಮೇಶ್, ಕಾಂತರಾಜು, ಶಿವಕುಮಾರ್, ಜ್ಯೋತಿಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.