ADVERTISEMENT

ರಾಮನಗರ ಬಂದ್‌ಗೆ ನೀರಸ ಪ್ರತಿಕ್ರಿಯೆ

ಸ್ಟಾಲಿನ್ ಅಣಕು ತಿಥಿ: ರಸ್ತೆಗೆ ರಕ್ತ ಚೆಲ್ಲಿ ಆಕ್ರೋಶ * ಪ್ರತಿಭಟನೆಗಷ್ಟೇ ಸೀಮಿತವಾದ ಬಂದ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2023, 14:40 IST
Last Updated 26 ಸೆಪ್ಟೆಂಬರ್ 2023, 14:40 IST
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಮನಗರ ಬಸ್ ನಿಲ್ದಾಣದ ಬಳಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್  ಅಣಕು ತಿಥಿ ಮಾಡಿದರು.  
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಮನಗರ ಬಸ್ ನಿಲ್ದಾಣದ ಬಳಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್  ಅಣಕು ತಿಥಿ ಮಾಡಿದರು.     

ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮಂಗಳವಾರ ಕರೆ ಕೊಟ್ಟಿದ್ದ ರಾಮನಗರ ಜಿಲ್ಲೆ ಬಂದ್‌ ಪ್ರತಿಭಟನೆಗಷ್ಟೇ ಸೀಮಿತವಾಯಿತು.

ರಾಜಕೀಯ ಪಕ್ಷಗಳು ಸೇರಿದಂತೆ 33ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದರೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ದೈನಂದಿನ ಜನಜೀವನ ಎಂದಿನಂತೆ ಇತ್ತು. ಶಾಲಾ–ಕಾಲೇಜು, ಬ್ಯಾಂಕ್‌, ಸರ್ಕಾರಿ ಕಚೇರಿ ತೆರೆದಿದ್ದವು. ವಾಹನ ಸಂಚಾರ, ವ್ಯಾಪಾರ–ವಹಿವಾಟು ಸುಗಮವಾಗಿ ನಡೆಯಿತು. 

‌‌ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಣಕು ತಿಥಿ ಮಾಡಿದರು. ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸಿರಿಂಜ್‌ಗಳಿಂದ ರಕ್ತ ತೆಗೆದು ರಸ್ತೆಗೆ ಚೆಲ್ಲಿ, ‘ರಕ್ತ ಕೊಟ್ಟೇವು, ಕಾವೇರಿ ಬಿಡೆವು’ ಎಂದು ಘೋಷಣೆ ಕೂಗಿದರು. 

ADVERTISEMENT
ಕೈಯಿಂದ ಸಿರಿಂಜ್‌ನಲ್ಲಿ ರಕ್ತ ತೆಗೆದು ರಸ್ತೆಗೆ ಚೆಲ್ಲಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ‘ರಕ್ತ ಕೊಟ್ಟೆವು ಕಾವೇರಿ ಬಿಡೆವು’ ಎಂದು ಘೋಷಣೆ ಕೂಗಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.