ADVERTISEMENT

ಬಿಡದಿ | ಛತ್ರದಲ್ಲಿ ಬಿಜಿಎಸ್ ಪಿಯು ಕಾಲೇಜು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 7:19 IST
Last Updated 19 ಜೂನ್ 2024, 7:19 IST
ಜ್ಯೋತಿ ಬೆಳಗುವುದೊರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ
ಜ್ಯೋತಿ ಬೆಳಗುವುದೊರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ   

ಬಿಡದಿ: ವಿದ್ಯಾರ್ಥಿಗಳು ಹೊಗಳಿಕೆಯನ್ನು ದೇವರಿಗೆ ಅರ್ಪಿಸಿ, ಲಕ್ಷ್ಯವನ್ನು ಗುರಿಯ ಕಡೆ ಇಡಬೇಕು ಎಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಿಡದಿ ಹೋಬಳಿ ಛತ್ರ ಗ್ರಾಮದಲ್ಲಿ ಹೊಸದಾಗಿ ಆರಂಭಿಸಲಾದ ಬಿಜಿಎಸ್ ಪಿಯು ಕಾಲೇಜನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ವಿದ್ಯೆ, ಬುದ್ಧಿ ಕೊಡುವುದು ಪೋಷಕರ ಜವಾಬ್ದಾರಿ. ಚೆನ್ನಾಗಿ ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದರು.

ADVERTISEMENT

ಮನುಷ್ಯನಿಗೆ ವಿದ್ಯೆಗಿಂತ ದೊಡ್ಡದು ಏನೂ ಇಲ್ಲ. ವಿದ್ಯೆಯೊಂದಿದ್ದರೆ ಪ್ರಪಂಚದಲ್ಲಿ ಎಲ್ಲಿಗೆ ಹೋದರೂ ಉತ್ತಮ ಸ್ಥಾನಮಾನ ದೊರೆಯುತ್ತದೆ. ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಬೇಕು. ಮಕ್ಕಳಿಗೆ ವಿದ್ಯೆ ಕಡಿಮೆಯಾದರೂ ಸಂಸ್ಕಾರ ಕಡಿಮೆಯಾಗಬಾರದು  ಎಂದು ಸೌಮ್ಯನಾಥ ಸ್ವಾಮೀಜಿ ಸಲಹೆ ನೀಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಠಾಧೀಶರು ಸನ್ಮಾನ ಮಾಡಿದರು.

ಅನ್ನದಾನೇಶ್ವರನಾಥ ಸ್ವಾಮೀಜಿ, ಕರವೇ ಅಧ್ಯಕ್ಷ ನಾರಾಯಣಗೌಡ, ಡಾ.ಶಿವರಾಮ ರೆಡ್ಡಿ, ಮಧುಸೂದನ್, ಪ್ರಾಚಾರ್ಯರಾದ ಮುತ್ತುರಾಜು, ದೊಡ್ಡವೀರೆಗೌಡ, ಚೇತನ್, ಪ್ರದೀಪ್, ಮರಿಸ್ವಾಮಿ, ಉಮೇಶ್, ಬಿಂದಿಯಾ, ಚರಣ್ ಕುಮಾರ್, ಗೋಪಾಲ್ ವೇದಿಕೆಯಲ್ಲಿದ್ದರು. 

ಹೆಚ್ಚು ಅಂಕ ಪಡೆದವರಿಗೆ ಸನ್ಮಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.