ADVERTISEMENT

ಮಾಗಡಿ | ಜಡೆ ಮುನೇಶ್ವರ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 7:22 IST
Last Updated 27 ಮಾರ್ಚ್ 2024, 7:22 IST
ಮಾಗಡಿ ತಾಲ್ಲೂಕಿನ ಮಾಡಬಳ ಗ್ರಾಮದ ಜಡೆಮೇಶ್ವರರ 26ನೇ ವಾರ್ಷಿಕೋತ್ಸವ ನಿಮಿತ್ತ ಪಟ್ಟಣದ ಬಸಪ್ಪ ದೇವರ ಮೆರವಣಿಗೆ ನಡೆಯಿತು
ಮಾಗಡಿ ತಾಲ್ಲೂಕಿನ ಮಾಡಬಳ ಗ್ರಾಮದ ಜಡೆಮೇಶ್ವರರ 26ನೇ ವಾರ್ಷಿಕೋತ್ಸವ ನಿಮಿತ್ತ ಪಟ್ಟಣದ ಬಸಪ್ಪ ದೇವರ ಮೆರವಣಿಗೆ ನಡೆಯಿತು   

ಮಾಗಡಿ: ತಾಲ್ಲೂಕಿನ ಮಾಡಬಾಳ ಗ್ರಾಮದ ಜಡೆ ಮುನೇಶ್ವರರ 26ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಪಟ್ಟದ ಬಸಪ್ಪ ದೇವರ ಮೆರವಣಿಗೆ ನಡೆಯಿತು.

ಪಟ್ಟದ ಬಸವಪ್ಪದೇವರ ಮೆರವಣಿಗೆಗೆ ಚಾಲನೆ ನೀಡಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಪ್ರಧಾನ ಅರ್ಚಕ, ಗುರುದೈವ ಎಂಬುದು ಮಾವಿನಮರವಿದ್ದಂತೆ. ಅದರಲ್ಲಿ ಸುಜ್ಞಾನದ ಚಿಗುರು ಒಡೆದು ಸ್ವಾನುಭವದ ಫಲ ಬಿಡಬೇಕು. ಆಗ ಎಲ್ಲಿಂದಲೇ ಶಿಷ್ಯರು ಕೋಗಿಲೆಯಂತೆ
ಬರುವವರು ಎಂದರು.

ಕುದೂರಿನ ಹಿರಿಯರ ರಂಗ ನಿರ್ದೇಶಕ ಗಂಗಾ ಮುನಿಯಪ್ಪ ಮಾತನಾಡಿ, ‘ಜಗತ್ತು ಸಾಗರದ ಮೇಲೆ ತೋರಿದ ತೆರೆಯಂತಿದೆ. ಅನಂತ ಪ್ರಜ್ಞೆಯ ಮಹಾಸಾಗರ ದೇವರ ಲೀಲಾ ವಿನೋದವನ್ನು ಅರಿತುಕೊಳ್ಳಲು ಧಾನ್ಯ ಅಗತ್ಯ’ ಎಂದರು.

ADVERTISEMENT

ಆಧ್ಯಾತ್ಮಿಕ ಚಿಂತಕ ವೀರಾಪುರ ಶಿವಣ್ಣ, ತತ್ವಪದಗಾರ್ತಿ ಹೊಸಪೇಟೆ ಗಿರಿಜಮ್ಮ, ಹಾರ್ಮೋನಿಯಂ ಮಾಸ್ಟರ್ ವೆಂಕಟರಾಮಯ್ಯ ರಂಗ ಕಲಾವಿದ ಎಂ.ಆರ್. ನಾಗರಾಜು, ನಿವೃತ್ತ ಶಿಕ್ಷಕ ಎಂ. ಕೆಂಪೇಗೌಡ, ಮಾಯಣ್ಣ, ಕರ್ಲಹಳ್ಳಿ ರಂಗೇಗೌಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.