ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಪದಕಗಳ ಬೇಟೆ

ಬರಡನಹಳ್ಳಿ ಕೃಷ್ಣಮೂರ್ತಿ
Published 3 ಜುಲೈ 2024, 7:01 IST
Last Updated 3 ಜುಲೈ 2024, 7:01 IST
<div class="paragraphs"><p>ಟ್ರೋಫಿಯೊಂದಿಗೆ ಡಿ.ಪ್ರಿಯಾ</p></div>

ಟ್ರೋಫಿಯೊಂದಿಗೆ ಡಿ.ಪ್ರಿಯಾ

   

ಕನಕಪುರ: ‍ಕ್ರೀಡೆಯಲ್ಲಿ ವಿಶೇಷ ಆಸಕ್ತಿಹೊಂದಿರುವ ತಾಲ್ಲೂಕಿನ ಡಿ. ಪ್ರಿಯಾ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾಳೆ.

ಕನಕಪುರದ ಮದರ್ ಥೆರೇಸಾ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಪ್ರಿಯಾ, ಅಥ್ಲೆಟಿಕ್ಸ್‌ನಲ್ಲಿ ಇದುವರೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಪ್ರಿಯಾ 11 ಚಿನ್ನದ ಪದಕ, 12 ಬೆಳ್ಳಿಯ ಪದಕ, 7 ಕಂಚಿನ ಪದಕ ಹಾಗೂ ಎರಡು ಬಾರಿ ಚಾಂಪಿಯನ್‌ಶಿಪ್ ತನ್ನದಾಗಿಸಿ ಕೊಂಡಿದ್ದಾಳೆ.

ADVERTISEMENT

ಬಾಲಕಿಯ ಸಾಧನೆಯ ಹಿಂದೆ ತಂದೆ ಧನಂಜಯ ಮತ್ತು ತಾಯಿ ಶೋಭಾ ಅವರ ಪ್ರೋತ್ಸಾಹ ಹಾಗೂ ಪರಿಶ್ರಮವಿದೆ. ಕನಕಪುರ ತಾಲ್ಲೂಕಿನ ಗಡಿಗ್ರಾಮ ಕೋಟಳ್ಳಿಯವರಾ ಪೋಷಕರು, ಮಗಳ ಸಾಧನೆಗಾಗಿ ಕನಕಪುರ ಪಟ್ಟಣದಲ್ಲಿ ನೆಲೆಸಿದ್ದಾರೆ.

ಬಾಲ್ಯದಲ್ಲಿ ಪತ್ರಿಕೆ, ಟಿ.ವಿಗಳಲ್ಲಿ ಕ್ರೀಡಾ ಸಾಧಕರ ಕುರಿತು ಸಾಧನೆಗಳನ್ನು ನೋಡುತ್ತಿದ್ದ ಪ್ರಿಯಾಗೆ ಮುಂದೊಂದು ತಾನೂ ಕ್ರೀಡಾ ಕ್ಷೇತ್ರದಲ್ಲಿ ಬೆಳಗಬೇಕೆಂಬ ಆಸೆ ಮೊಳೆಯಿತು. ಅಂತೆಯೇ ಶಾಲೆಯಲ್ಲಿ ನಡೆಯುವ ಕ್ರೀಡಾ ಸ್ಪರ್ಧೆಗಳ ಮೂಲಕ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದಳು.

ಶಾಲೆಯಲ್ಲಿ ಓಟದ ಸ್ಪರ್ಧೆ, ಉದ್ದಜಿಗಿತ, ಎತ್ತರಜಿಗತಕ್ಕೆ ಸೇರಿಕೊಂಡ ಪ್ರಿಯಾ, ಶಿಕ್ಷಣ ಇಲಾಖೆ ನಡೆಸುವ ಕ್ರೀಡೆಗಳಲ್ಲಿ ಶಾಲೆಯಿಂದ ಆಯ್ಕೆಯಾಗಿ, ಶಾಲಾ ಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯಮಟ್ಟದವರೆಗೂ ಆಯ್ಕೆಯಾಗಿದ್ದಾಳೆ. ಅಷ್ಟೇ ಅಲ್ಲ ಭಾಗವಹಿಸಿದ ಸ್ಪರ್ಧೆಗಳಲ್ಲಿ ಕಾಯಂ ಆಗಿ ಬಹುಮಾನ ಗಳಿಸಿದ್ದಾಳೆ.

ಮಗಳ ಕ್ರೀಡಾಸಕ್ತಿಯನ್ನು ಗಮನಿಸಿದ ಪೋಷಕರು, ಕನಕಪುರದ ಅಡ್ವೆಂಚರ್ ಅಥ್ಲೆಟಿಕ್ ಅಕಾಡೆಮಿಯಲ್ಲಿ ತರಬೇತಿ ಕೊಡಿಸುತ್ತಿದ್ದಾರೆ.

ಶಿಕ್ಷಣ ಇಲಾಖೆ, ಯುವಜನ ಕ್ರೀಡಾ ಇಲಾಖೆ, ಮೈಸೂರು ದಸರಾ,ರಾಜ್ಯ ಅಂತರ ಶಾಲೆ ಅಥ್ಲೆಟಿಕ್ ಕ್ರೀಡಾಕೂಟ ಸೇರಿದಂತೆ ಕ್ರೀಡಾ ಸಮಿತಿಗಳು ನಡೆಸಿದ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನ, ಬೆಳ್ಳಿ, ಕಂಚು, ಟ್ರೋಫಿ ಗೆದ್ದು, ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.