ADVERTISEMENT

ರಾಮನಗರ | ಪರೀಕ್ಷೆ: ನಿರಾಶೆ ಬಿಡಿ, ಸತತ ಪ್ರಯತ್ನ ಮಾಡಿ- ಬೋಡ್ಕೆ

ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಬಳಗದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 6:08 IST
Last Updated 1 ಫೆಬ್ರುವರಿ 2024, 6:08 IST
   

ರಾಮನಗರ: ಪರೀಕ್ಷೆಯಲ್ಲಿ ಅನುತ್ತೀರ್ಣ ಅಥವಾ ಕಡಿಮೆ ಅಂಕ ಬಂತೆಂಬ ಕಾರಣಕ್ಕೆ ನಿರಾಶರಾಬೇಕಿಲ್ಲ. ಬದಲಿಗೆ, ಸತತ ಪ್ರಯತ್ನಪಟ್ಟರೆ ಎಂತಹ ಸಾಧನೆಯನ್ನು ಸಹ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ಹೇಳಿದರು.

'ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬಳಗವು ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿ.ಪಂ. ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ‘ಪ್ರೇರಣಾ ಕಾರ್ಯಗಾರ’ದಲ್ಲಿ ಅವರು ಮಾತನಾಡಿದರು.

ಶಾಲಾ ಕಾಲೇಜು ಶಿಕ್ಷಣದಲ್ಲಿ ನಾನು ಸಹ ಸ್ವಲ್ಪ ಹಿಂದುಳಿದಿದ್ದೆ. ಆದರೆ, ಸತತ ಪ್ರಯತ್ನದಿಂದ ನಂತರ ಶಿಕ್ಷಣದಲ್ಲಿ ‌ಮುಂದೆ ಬಂದೆ. ನಾಗರಿಕ ಸೇವೆಯ ಕನಸು ಕಂಡು ಇದೀಗ ನಿಮ ಮುಂದೆ ಬಂದು ನಿಂತಿದ್ದೇನೆ ಎಂದರು.

ADVERTISEMENT

'ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಅವರು ಪ್ರಾಸ್ತಾವಿಕ‌ ನುಡಿಗಳನ್ನಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ. ಬಸವರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಇಒ ಟಿ. ಪ್ರದೀಪ್, ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಬಳಗದ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ ಜೋಯಿಸ್, ಪ್ರಜಾವಾಣಿ ಗ್ರಾಮಾಂತರ ಬ್ಯುರೊ ಮುಖ್ಯಸ್ಥ ಗವಿಸಿದ್ದಪ್ಪ ಬ್ಯಾಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.