ADVERTISEMENT

ನಿವೃತ್ತ ಪೊಲೀಸಪ್ಪನಿಗೆ ಖುಷಿ ಕೊಟ್ಟ ಕೃಷಿ

ನಿವೃತ್ತಿ ಬಳಿಕ ಬೇಸಾಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 7:06 IST
Last Updated 5 ನವೆಂಬರ್ 2024, 7:06 IST
ತಮ್ಮ ಕೃಷಿ ಭೂಮಿಯಲ್ಲಿ ವಿವಿಧ ಬಗೆಯ ಬೆಳೆಗಳೊಂದಿಗೆ
ತಮ್ಮ ಕೃಷಿ ಭೂಮಿಯಲ್ಲಿ ವಿವಿಧ ಬಗೆಯ ಬೆಳೆಗಳೊಂದಿಗೆ   

ಬಿಡದಿ: ನಿವೃತ್ತಿ ಬಳಿಕ ಬಹತೇಕರು ವಿಶ್ರಾಂತಿ ಜೀವನ ನಡೆಸಲು ಇಚ್ಛಿಸುತ್ತಾರೆ. ಆದರೆ ಇಲ್ಲೊಬ್ಬ ನಿವೃತ್ತ ಪೊಲೀಸಪ್ಪ ನಿವೃತ್ತ ಬಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಬೇಸಾಯ ಕಾಯಕದಲ್ಲಿ ಖುಷಿ ಕಾಣುತ್ತಿದ್ದಾರೆ.

ಬಿಡದಿ ಹೋಬಳಿ ಬಾನಂದೂರು ಗ್ರಾಮದಲ್ಲಿ 64 ವರ್ಷದ ಬಿ.ಸಿ.ಶಿವಲಿಂಗಯ್ಯ ಅವರು ವಿವಿಧ ವಾಣಿಜ್ಯ ಬೆಳೆ ಬೆಳೆಯುತ್ತಾ ಲಾಭ ಗಳಿಸುತ್ತಿದ್ದಾರೆ.

ಬಿ.ಸಿ.ಶಿವಲಿಂಗಯ್ಯ ಅವರು 1981ರಲ್ಲಿ ಪೋಲಿಸ್ ಇಲಾಖೆಗೆ ಸೇರ್ಪಡೆಯಾದರು. 1987ರಲ್ಲಿ ಆರೋಗ್ಯ ಸಚಿವೆ ಕೆ.ಎಸ್. ನಾಗರತ್ಮಮ್ಮ ಅವರಿಗೆ ಗನ್‌ಮ್ಯಾನ್ ಆಗಿದ್ದರು. ನಂತರ, ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ ಕಾವೇರಿಯಲ್ಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್.ಎಂ. ಕೃಷ್ಣ, ಧರಂ ಸಿಂಗ್ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದರು. ಬಳಿಕ 2006ರಲ್ಲಿ ಸ್ವಯಂ ನಿವೃತ್ತರಾದರು.

ADVERTISEMENT

ತಮ್ಮ ಊರಿಗೆ ಮರಳಿದ ಬಳಿಕ ತಮ್ಮ ಪಿತ್ರಾರ್ಜಿತ 1 ಎಕರೆ 15 ಗುಂಟೆ ಜಮೀನಿನಲ್ಲಿ  ಕೃಷಿ ಆರಂಭಿಸಿದರು. ಆರಂಭದಲ್ಲಿ ಮಾವು ಬೆಳೆ ಬೆಳೆದರು. ಆದರೆ ಅದರಲ್ಲಿ ನಿರೀಕ್ಷಿತ ಲಾಭ ಮತ್ತು ಫಲಕ್ಕಾಗಿ ಕಾಯಬೇಕೆಂದು ವಾಣಿಜ್ಯ ಬೆಳೆಗಳಿಗೆ ವಾಲಿದರು.

ಈಗ ಅವರು ತಮ್ಮ ಜಮೀನಿನಲ್ಲಿ ತೆಂಗು, ಅಡಿಕೆ, ಗಂಧದ ಗಿಡ, ಬಟರ್ ಪ್ರೂಟ್, ಏಲಕ್ಕಿ ಜೊತೆಗೆ ರಾಗಿ, ತೊಗರಿ ಮತ್ತು ವಿವಿಧ ಬಗೆಯ ಸೊಪ್ಪು ಬೆಳೆಯುತ್ತಿದ್ದಾರೆ.

ವಾಣಿಜ್ಯ ಬೆಳೆಗಳಿಗೆ ಪ್ರಾರಂಭದಲ್ಲಿ ಬೋರವೆಲ್‌ನಿಂದ ಹನಿ ನೀರಾವರಿ ವಿಧಾನದಿಂದ ನೀರು ಪೂರೈಸುತ್ತಿದ್ದರು, ಈಗ ಮಳೆಯ ನೀರಿನ ಸಹಾಯದಿಂದ ಮತ್ತು ಬೋರವೆಲ್‌ನ ನೀರನ್ನು ಬೇರೆ ಬೇರೆ ಬೆಳೆಗಳಿಗೆ ಬಳಸುತ್ತಿದ್ದಾರೆ.

ಶಿವಲಿಂಗಯ್ಯನವರ ವಾಣಿಜ್ಯ ಬೆಳೆಯೊಂದಿಗೆ

ಕೃಷಿ ಎಂದರೆ ಅಚ್ಚುಮೆಚ್ಚು

ಕೃಷಿ ಎಂದರೆ ನನಗೆ ಅಚ್ಚು ಮೆಚ್ಚು. ಹೀಗಾಗಿ ಸ್ವಯಂ ನಿವೃತ್ತಿ ಪಡೆದು ಕೃಷಿಯಲ್ಲಿ ತೊಡಗಿಸಿಕೊಂಡು ಇದರಲ್ಲಿ ಬರುವ ಆದಾಯದಲ್ಲೇ  ಜೀವನ ಸಾಗಿಸುತ್ತಿದ್ದೇನೆ. ಗ್ರಾಮೀಣ ಭಾಗದ ಯುವಕರು ಖಾಸಗಿ ಕಂಪನಿಗಳಿಗೆ ಅತಿ ಕಡಿಮೆ ಸಂಬಳಕ್ಕೆ ನಗರಕ್ಕೆ ಹೋಗುತ್ತಿರುವುದು ಬೇಸರ ತರುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ದುಡಿದರೆ ಸಾಕಷ್ಟ ಲಾಭಗಳಿಸಬಹುದು ಎನ್ನುತ್ತಾರೆ ಬಿ.ಶಿ. ಶಿವಲಿಂಗಯ್ಯ. ವಾಣಿಜ್ಯ ಬೆಳೆಗಳು ಅತಿ ಕಡಿಮೆ ಸಮಯದಲ್ಲಿ ಲಾಭ ತರುತ್ತವೆ. ಜೊತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆಯಿಂದ ಯಶಸ್ಸು ಸಾಧಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.