ADVERTISEMENT

ಎಸ್‌ಎಫ್‌ಸಿ ಅನುದಾನ ಬಳಕೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 4:15 IST
Last Updated 27 ಜೂನ್ 2024, 4:15 IST
ಬಿಡದಿ 8 ನೇ ವಾರ್ಡ ಪುರಸಭಾ ಸದಸ್ಯರು ಮತ್ತು ನಾಯಕರುಗಳಿಂದ ಸುದ್ದಿ ಗೋಷ್ಟಿ
ಬಿಡದಿ 8 ನೇ ವಾರ್ಡ ಪುರಸಭಾ ಸದಸ್ಯರು ಮತ್ತು ನಾಯಕರುಗಳಿಂದ ಸುದ್ದಿ ಗೋಷ್ಟಿ   

ಬಿಡದಿ: ‘ಬಿಡದಿ ಪುರಸಭೆ 7, 8 ಮತ್ತು 13ನೇ ವಾರ್ಡ್‌ಗಳ ರಸ್ತೆ ಅಭಿವೃದ್ಧಿ ಮತ್ತು  ಚರಂಡಿ ಕಾಮಗಾರಿಗೆ 2018-19ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ₹ 10 ಕೋಟಿ ಮಂಜೂರಾಗಿತ್ತು. ಈ ಅನುದಾನವನ್ನು ಸದರಿ ವಾರ್ಡಗಳಿಗೆ ವಿನಿಯೋಗಿಸುವಂತೆ ನಗರಾಭಿವೃದ್ಧಿ ಇಲಾಖೆ ಈಚೆಗೆ ಆದೇಶ ಹೊರಡಿಸಿದೆ ಎಂದು ಬಿಡದಿ ಪುರಸಭೆಯ 8ನೇ ವಾರ್ಡ್‌ನ ಸದಸ್ಯ ದೇವರಾಜ್ ತಿಳಿಸಿದರು.

ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಮೇಲಿನ ವಾರ್ಡ್‌ಗಳ ಅಭಿವೃದ್ಧಿಗೆ ₹ 10 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಆಗ ಜಿಲ್ಲಾಧಿಕಾರಿ ಅನುಮೋದನೆ ಮೇರೆಗೆ ₹ 6 ಕೋಟಿ ಕಾಮಗಾರಿಗೆ ಬಳಕೆಯಾಗಿತ್ತು. ಸದರಿ ವಾರ್ಡಗಳ ಯುಜಿಡಿ ಮತ್ತು ವಾಟರ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ಉಳಿಕೆ ₹ 4 ಕೋಟಿ ಅನುದಾನ ಬಳಸಲು ವಿಳಂಬವಾಗಿತ್ತು’ ಎಂದರು.

‘ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೆಲವು ಕಾಂಗ್ರೆಸ್ ಮುಖಂಡರ ಒತ್ತಾಯಕ್ಕೆ ಮಣಿದು ಬದಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಈ ₹ 4 ಕೋಟಿ ನುದಾನವನ್ನು ಬೇರೆ ವಾರ್ಡ್‌ಗಳಿಗೆ ವರ್ಗಾಯಿಸಲು ನಿರ್ಧರಿಸಿದ್ದರು. ಇದರ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಜೆಡಿಎಸ್ ಸದಸ್ಯರು ಹಾಗೂ ಮುಖಂಡರು ತಮಟೆ ಚಳವಳಿ ನಡೆಸಿದ್ದರು. ನಂತರ ಅನುದಾನ ಕುರಿತು ಶಾಸಕರಿಗೆ ತಿಳಿಸಿದರು ಸ್ಪಂದನೆ ಸಿಗಲಿಲ್ಲ’ ಎಂದು ದೂರಿದರು.

ADVERTISEMENT

‘ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವವರನ್ನು ಸ್ಥಳೀಯರೊಂದಿಗೆ ಭೇಟಿ ಮಾಡಿ ಅನುದಾನ ವರ್ಗಾವಣೆ ವಿಷಯ ಗಮನಕ್ಕೆ ತರಲಾಯಿತು. ಆಗ ಅವರು ಈ ವಿಚಾರದಲ್ಲಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಎಂದಿದ್ದರು. ಅಂತೆಯೇ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅವರು ಸರ್ಕಾರದ ಆದೇಶ ಸಂಖ್ಯೆ ನಂ 160 ಎಸ್‌ಎಫ್‌ಸಿ 2018ರ ಅನ್ವಯ ನಿಯಮಾನುಸಾರ ಪರಿಶೀಲಿಸಿ ತಮ್ಮ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುವಂತೆ 2024ರ ಜೂನ್ 20ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ’ ಎಂದು ಆರ್‌. ದೇವರಾಜು ಮಾಹಿತಿ ನೀಡಿ, ಆದೇಶ ಪ್ರತಿಯನ್ನು ಪ್ರದರ್ಶಿಸಿದರು.

ಸದರಿ ವಾರ್ಡುಗಳ ವ್ಯಾಪ್ತಿಯಲ್ಲಿ ವಿಶೇಷ ಅನುದಾನದಡಿ ಕ್ರಿಯಾಯೋಜನೆ ಹಾಗೂ ಟೆಂಡರ್ ಆಗಿರುವ ಕಾಮಗಾರಿಗಳಿಗೆ ಕೆಲವರು ಕಾಂಗ್ರೆಸ್ ಮುಖಂಡರು ಪುರಸಭೆ ನಿಧಿಯಡಿ ಅಧಿಕಾರಿಗಳಿಂದ ಮತ್ತೊಂದು ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸೋಮಶೇಖರ್, ಮಾಜಿ ಸದಸ್ಯ ಟಿ.ಕುಮಾರ್, ಗೋಪಾಲಯ್ಯ, ಮಹದೇವಯ್ಯ, ಬಾಬು, ರಾಜು, ಮಂಜು, ಸಿಂಗ್ರೀಗೌಡ, ರಾಜಶೇಖರ್, ಶ್ರೀನಿವಾಸ್, ಶ್ಯಾಮ್, ರುದ್ರೇಶ್, ಅಭಿ, ನಾರಾಯಣ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.