ADVERTISEMENT

ರಾಮದೇವರ ಬೆಟ್ಟದಲ್ಲಿ ಭಕ್ತರ ದಂಡು

ಕಡೆಯ ಶ್ರಾವಣ ಶನಿವಾರ: ದೇಗುಲಗಳಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 19:30 IST
Last Updated 24 ಆಗಸ್ಟ್ 2019, 19:30 IST
ಶ್ರಾವಣ ಶನಿವಾರದ ಅಂಗವಾಗಿ ರಾಮದೇವರ ಬೆಟ್ಟ ಏರಿದ ಭಕ್ತರು
ಶ್ರಾವಣ ಶನಿವಾರದ ಅಂಗವಾಗಿ ರಾಮದೇವರ ಬೆಟ್ಟ ಏರಿದ ಭಕ್ತರು   

ರಾಮನಗರ: ಕಡೆಯ ಶ್ರಾವಣ ಶನಿವಾರದ ಅಂಗವಾಗಿ ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.

ರಾಮದೇವರ ಬೆಟ್ಟದಲ್ಲಿನ ಪಟ್ಟಾಭಿರಾಮ, ಛತ್ರದ ಬೀದಿಯ ಶ್ರೀರಾಮ ದೇವಾಲಯ, ಆಗ್ರಹಾರ ಅಭಯ ಆಂಜನೇಯ ಸ್ವಾಮಿ ದೇವಾಲಯ, ಕೂಟಗಲ್ ತಿಮ್ಮಪ್ಪ ದೇವಾಲಯ, ಬಿಡದಿ ಕೋತಿ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ನೆರೆದಿದ್ದರು.

ರಾಮದೇವರ ಬೆಟ್ಟದಲ್ಲಿ ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಕಡೆಯ ಶ್ರಾವಣದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಅರಣ್ಯ ಇಲಾಖೆಯು ಉಚಿತ ಪ್ರವೇಶ ಕಲ್ಪಿಸಿತ್ತು. ಬೆಳಿಗ್ಗೆ 5.30ರಿಂದಲೇ ದೇವರಿಗೆ ಪೂಜೆ ನಡೆಯಿತು. ಮಧ್ಯಾಹ್ನ ದೇವರ ಮೂರ್ತಿಯನ್ನು ಉತ್ಸವ ಮಾಡಲಾಯಿತು. ರಾಮಗಿರಿ ಸೇವಾ ಟ್ರಸ್ಟ್‌ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘಟನೆಗಳ ಸದಸ್ಯರೂ ಕೈಜೋಡಿಸಿದರು.

ADVERTISEMENT

ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಂಗಳೂರು ಮೊದಲಾದ ಜಿಲ್ಲೆಗಳಲ್ಲಿನ ಭಕ್ತರು ಬಂದಿದ್ದರು. ಸಾವಿರಾರು ಭಕ್ತರು ಬಂದ ಕಾರಣ ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಹೀಗಾಗಿ ಪೊಲೀಸರು ಬೆಟ್ಟದ ಹೊರ ಭಾಗದಲ್ಲಿಯೇ ವಾಹನಗಳನ್ನು ನಿಯಂತ್ರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.