ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ: ಏಳು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 18:43 IST
Last Updated 26 ಮೇ 2022, 18:43 IST
ಪ್ರಕರಣದ ಆರೋಪಿಗಳು ( ಎಡದಿಂದ) ಪ್ರಾಚಾರ್ಯ ಶ್ರೀನಿವಾಸ, ಶಿಕ್ಷಕರಾದ ಅಲೀಂ ಉಲ್ಲಾ, ಸುಬ್ರಹ್ಮಣ್ಯ, ಅರ್ಜುನ್‌, ಶ್ರೀನಿವಾಸ ಹಾಗೂ ನಾಗರಾಜು
ಪ್ರಕರಣದ ಆರೋಪಿಗಳು ( ಎಡದಿಂದ) ಪ್ರಾಚಾರ್ಯ ಶ್ರೀನಿವಾಸ, ಶಿಕ್ಷಕರಾದ ಅಲೀಂ ಉಲ್ಲಾ, ಸುಬ್ರಹ್ಮಣ್ಯ, ಅರ್ಜುನ್‌, ಶ್ರೀನಿವಾಸ ಹಾಗೂ ನಾಗರಾಜು   

ರಾಮನಗರ: ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ ಸಂಬಂಧ ಬಂಧಿಸಲಾದ 10 ಆರೋಪಿಗಳ ಪೈಕಿ ಏಳು ಮಂದಿಯನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದ್ದು, ಉಳಿದ ಮೂವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲ್ಲ ಆರೋಪಿಗಳನ್ನು ಬುಧವಾರ ರಾತ್ರಿ ಮಾಗಡಿ ಜೆಎಂಎಫ್‌ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ಈ ಪೈಕಿ ಕೆಂಪೇಗೌಡ ಶಾಲೆಯ ಕ್ಲರ್ಕ್‌ ರಂಗೇಗೌಡ, ರಂಗನಾಥ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಶಿಕ್ಷಕ ಲೋಕೇಶ್‌ ಅವರನ್ನು ಪೊಲೀಸರು ಮರಳಿ ವಶಕ್ಕೆ ಪಡೆದರು. ಕೆಂಪೇಗೌಡ ಪ್ರೌಢಶಾಲೆ ಪ್ರಾಚಾರ್ಯ ಶ್ರೀನಿವಾಸ, ವಿಷಯ ತಜ್ಞರಾದ ಸುಬ್ರಹ್ಮಣ್ಯ, ಶ್ರೀನಿವಾಸ, ಅರ್ಜುನ್, ಅಲೀಂ ಉಲ್ಲಾ, ನಾಗರಾಜು, ಸ್ಥಳೀಯ ಪತ್ರಕರ್ತ ವಿಜಯ್ ಕುಮಾರ್ ಎಂಬುವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.