ADVERTISEMENT

ರಾಮನಗರ | ಟೇಕ್ವಾಂಡೊ: ಶಾನ್ವಿಗೆ ಕಂಚಿನ ಪದಕ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 16:09 IST
Last Updated 15 ನವೆಂಬರ್ 2024, 16:09 IST
ಕಂಚಿನ ಪದಕದೊಂದಿಗೆ ಶಾನ್ವಿ ಸತೀಶ್
ಕಂಚಿನ ಪದಕದೊಂದಿಗೆ ಶಾನ್ವಿ ಸತೀಶ್   

ರಾಮನಗರ: ಉಜ್ಬೇಕಿಸ್ತಾನದಲ್ಲಿ ಇತ್ತೀಚೆಗೆ ಜರುಗಿದ ‘ವರ್ಲ್ಡ್ ಟೇಕ್ವಾಂಡೊ ಚಾಂಪಿಯನ್‌ಶಿಫ್–2024’ ಸ್ಪರ್ಧೆಯ 6 ವರ್ಷದಿಂದ 10 ವರ್ಷದೊಳಗಿನವರ ವಿಭಾಗದಲ್ಲಿ ಭಾಗವಹಿಸಿದ್ದ ರಾಮಗರದ ಶಾನ್ವಿ ಸತೀಶ್ ಕಂಚಿನ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಸ್ಪರ್ಧೆಯಲ್ಲಿ ಕಜಕಿಸ್ತಾನ, ಯುಎಇ, ಬಾಂಗ್ಲಾದೇಶ, ರಷ್ಯ, ಇಥಿಯೋಪಿಯ, ಉಜ್ಬೇಕಿಸ್ತಾನ, ಕೊರಿಯಾ, ಮಂಗೋಲಿಯಾ, ಮಲೇಷ್ಯಾ, ಜಪಾನ್, ಕೀನ್ಯಾ ಸೇರಿದಂತೆ ಸುಮಾರು 50 ರಾಷ್ಟ್ರಗಳ 1,300 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ, ಭಾರತದಿಂದ 36 ಮಂದಿ ಪ್ರತಿನಿಧಿಸಿದ್ದರು. ಈ ಪೈಕಿ ಶಾನ್ವಿ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದಳು.

ಅಂತಿಮ ಸ್ಪಾರಿಂಗ್ ಪಂದ್ಯದಲ್ಲಿ ಉಜ್ಬೇಕಿಸ್ತಾನ ಎದುರಾಳಿಯನ್ನು ಮಣಿಸಿದ ಶಾನ್ವಿ ತೃತೀಯ ಸ್ಥಾನ ಪಡೆದಿದ್ದಾಳೆ. ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್ ಮತ್ತು ಚೈತ್ರ ದಂಪತಿ ಪುತ್ರಿಯಾದ ಶಾನ್ವಿ, ನಗರದ ನೇಟಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪ್ರದೀಪ್ ಮತ್ತು ಬಾಲರಾಜನ್ ಶಾನ್ವಿಯ ತರಬೇತುದಾರರಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.