ADVERTISEMENT

ಮಾಗಡಿ: ರಸ್ತೆ ಮೇಲೆ ಸೊಪ್ಪು ತರಕಾರಿ ಮಾರಾಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:51 IST
Last Updated 1 ಫೆಬ್ರುವರಿ 2024, 15:51 IST
<div class="paragraphs"><p>ರಸ್ತೆಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು</p></div>

ರಸ್ತೆಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು

   

ಮಾಗಡಿ: ಪಟ್ಟಣದ ಕಲ್ಯಾಬಾಗಿಲು ನಾರಸಿಂಹ ಸರ್ಕಲ್‌ ಬಳಿ ರಸ್ತೆ ಮೇಲೆ ಸೊಪ್ಪು, ತರಕಾರಿ ಮಾರಾಟ ಮಾಡುತ್ತಿದ್ದಾರೆ. ರಸ್ತೆ ಮೇಲೆ ವಾಹನ ದಟ್ಟಣೆ ಅಧಿಕವಾಗಿರುವುದರಿಂದ ಅಪಘಾತಗಳಾಗುತ್ತಿವೆ ಎಂದು ನಾಗರಿಕರ ಹಿತರಕ್ಷಣಾ ಸಮಿತಿಯು ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದೆ ಸಿದ್ದಲಿಂಗಯ್ಯ ತಿಳಿಸಿದರು.

ನಾರಸಿಂಹ ಸರ್ಕಲ್‌ ಬಳಿ ಸಾರ್ವಜನಿಕ ವಿನಾಯಕಸ್ವಾಮಿ ದೇವಾಲಯವಿದೆ. ದೇವಾಲಯದ ಪಕ್ಕದ ರಸ್ತೆ ಮೇಲೆ ಸೊಪ್ಪು, ತರಕಾರಿ, ಅವರೆಕಾಯಿ, ಹಣ್ಣು ಹಂಪಲು ಮಾರಾಟ ಮಾಡುತ್ತಾರೆ. ವಾಹನಗಳು ಮುಂದೆ ಹೋಗಲು ಪರದಾಡಬೇಕಿದೆ. ರಸ್ತೆ ಮೇಲೆ ಸೊಪ್ಪು, ತರಕಾರಿ ಮಾರಾಟ ಮಾಡುವುದನ್ನು ತೆರವುಗೊಳಿಸಬೇಕು ಎಂದು ವೀರಭದ್ರಯ್ಯ ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.