ADVERTISEMENT

ಅಮರಶಿಲ್ಪಿ ಜಕಣಾಚಾರಿ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 14:43 IST
Last Updated 2 ಜನವರಿ 2024, 14:43 IST
ಕನಕಪುರ ತಾಲ್ಲೂಕು ಕಚೇರಿಯಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಮುಖಂಡರು ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕನಕಪುರ ತಾಲ್ಲೂಕು ಕಚೇರಿಯಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಮುಖಂಡರು ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಕನಕಪುರ: ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಸೋಮವಾರ ಅಮರಶಿಲ್ಪಿ ಜಕಣಾಚಾರಿ ಜನ್ಮ ದಿನಾಚರಣೆ ನಡೆಯಿತು.

ವಿಶ್ವಕರ್ಮ ಸಮುದಾಯದ ಜನತೆ ತಾಲ್ಲೂಕಿನಲ್ಲಿ ತೀರಾ ಹಿಂದುಳಿದಿದ್ದಾರೆ. ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಸಮುದಾಯ ಭವನ  ನಿರ್ಗಾಣ ಮಾಡಿ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಉತ್ತೇಜನ ನೀಡಬೇಕೆಂದು ವಿಶ್ವಕರ್ಮ ಸಮುದಾಯದ ಮುಖಂಡರು ಒತ್ತಾಯಿಸಿದರು.

ಈ ವೇಳೆ ಸಮುದಾಯದ ಮುಖಂಡರಾದ ಶಿವರುದ್ರಚಾರ್, ಚಂದ್ರು, ವಸಂತ ಮಾತನಾಡಿ, ವಿಶ್ವಕರ್ಮರು ಇಂದು ತಮ್ಮ ಅಸ್ತಿತ್ವಕ್ಕಾಗಿ ಸಮುದಾಯದ ಜನತೆ ಹೋರಾಡಬೇಕಿದೆ. ವಿಶ್ವಕರ್ಮ ಸಮುದಾಯದವರು ಕುಲ ಕಸುಬು ನಂಬಿ ಜೀವನ ನಡೆಸುತ್ತಿದ್ದಾರೆ ಎಂದರು.

ಈ ವೇಳೆ ಸಮುದಾಯದ ಮುಖಂಡರು ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್ ಮಾತನಾಡಿ, ಮುಖಂಡರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸಮುದಾಯ ಭವನ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.

ADVERTISEMENT

ಈ ವೇಳೆ ಶಿರಸ್ತೆದಾರ್ ಪ್ರಕಾಶ್, ಶ್ರೀನಿವಾಸ್, ಶಿವಲಿಂಗೇಗೌಡ, ಕೂಗಿ ಗಿರಿಯಪ್ಪ ಮಲ್ಲಿಕಾರ್ಜುನ್, ಕುಮಾರ್, ಶಿವರಾಜ್, ಶೇಖರ್, ಮಹೇಶ್, ಶೇಖರ್, ಬಸವರಾಜು, ನಾಗರಾಜು, ಕೃಷ್ಣಪ್ಪ, ನಂದಕುಮಾರ್, ಕೃಷ್ಣ, ಚೆನ್ನಪ್ಪ, ಪ್ರಕಾಶ್, ಆನಂದ್, ಪುಟ್ಟರಾಜ, ಚಂದ್ರಚಾರ್, ಚೂಡಾಚಾರ್, ಸಿದ್ದಪ್ಪಾಜಿ, ಮಣಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.