ಚನ್ನಪಟ್ಟಣ: ಜಗತ್ತಿನ ಸುಂದರ ಶಿಲ್ಪಕಾರರಾದ ವಿಶ್ವಕರ್ಮ ಸಮುದಾಯ ಸುಂದರ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.
ನಗರದ ಕಾಳಿಕಾಂಭ ಸಮುದಾಯದ ಭವನದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ.ಜಯಮುತ್ತು ಮಾತನಾಡಿ, ವಿಶ್ವಕರ್ಮ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಸಮಾಜವನ್ನು ಸುಂದರ ಮಾಡಿರುವ ವಿಶ್ವಕರ್ಮ ಸಮದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮೇಲೇರಿ ತಮ್ಮ ಬದುಕು ಸುಂದರ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ, ಹಾಸ್ಯನಟ ವಿನೋದ್ ಗೊಬ್ಬರಗಾಲ, ರಾಜ್ಯ ಹಿಂದುಳಿದ ವರ್ಗಗಳ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷೆ ಪವಿತ್ರ ಪ್ರಭಾಕರರೆಡ್ಡಿ, ಕಾಳಿಕಾಂಬ ಕಮಟೇಶ್ವರ ಸಮಿತಿ ಅಧ್ಯಕ್ಷ ವೀರಭದ್ರಾಚಾರ್, ಮುಖಂಡರಾಧ ಮನು ಬ್ರಹ್ಮಾಚಾರ್, ಚಿನ್ನಸ್ವಾಮಾಚಾರ್, ಅಶ್ವಥಾಚಾರ್, ಕೃಷ್ಣಾಚಾರ್, ಎನ್.ರಘು, ತಾಲ್ಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಜೆ.ಎಸ್.ರಾಜು, ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಖಜಾಂಚಿ ರಾಜೇಂದ್ರ, ಉಪಾಧ್ಯಕ್ಷರಾದ ಆರ್.ಜಗದೀಶ್, ರಾಜು, ಆರ್.ಶಂಕರ್, ಸಹಕಾರ್ಯದರ್ಶಿ ಬೆಳಕೆರೆ ರಾಜೇಶ್, ಕಾನೂನು ಸಲಹೆಗಾರ್ತಿ ಹೇಮಾ, ಸಂಘಟನಾ ಕಾರ್ಯದರ್ಶಿಗಳಾದ ಜಿ.ವಿನಯ್, ರವಿ ಬ್ರಹ್ಮಣೀಪುರ, ನಿರ್ದೇಶಕರು ಭಾಗವಹಿಸಿದ್ದರು.
ಸಮುದಾಯದ ಶಿಲ್ಪಿಗಳಾದ ಚಂದ್ರಶೇಖರ, ದೇವರ ಹೊಸಹಳ್ಳಿ ಮಂಜುಳಾ, ಗಂಗಾಧರಚಾರ್, ಪುಟ್ಟಸ್ವಾಮಾಚಾರ್ ಇತರರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.