ADVERTISEMENT

ಬಿಡದಿ: ಕ್ಯಾಮೆರಾ ಮುಂದೆಯೇ ಕಸದ ರಾಶಿ

ಯೋಗಾನಂದ
Published 9 ಅಕ್ಟೋಬರ್ 2024, 7:54 IST
Last Updated 9 ಅಕ್ಟೋಬರ್ 2024, 7:54 IST
ಪುರಸಭೆ ವತಿಯಿಂದ ಅಳವಡಿಸಿರುವ ಕ್ಯಾಮರಾ ಮುಂದೆ ಕಸದ ರಾಶಿ
ಪುರಸಭೆ ವತಿಯಿಂದ ಅಳವಡಿಸಿರುವ ಕ್ಯಾಮರಾ ಮುಂದೆ ಕಸದ ರಾಶಿ   

ಬಿಡದಿ: ಪಟ್ಟಣದ ಹಲವು ಕಡೆ ಕಸದ ಬ್ಲಾಕ್ ಸ್ಪಾಟ್‌ಗಳಾಗಿರುವ ರಸ್ತೆಬದಿ, ಖಾಲಿ ನಿವೇಶನ, ಮುಖ್ಯ ರಸ್ತೆ, ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಪುರಸಭೆ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಪಟ್ಟಣದ ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಕ್ಯಾಮೆರಾ ಮುಂದೆಯೇ ಜನ ಕಸ ಸುರಿದು ಹೋಗುತ್ತಿದ್ದಾರೆ.

ಬ್ಲಾಕ್ ಸ್ಪಾಟ್‌ಗಳಾಗಿರುವ ಸ್ಥಳಗಳಲ್ಲಿಯೇ ಮತ್ತೆ ಮತ್ತೆ ಕಸದ ರಾಶಿಗಳು ಬೀಳುತ್ತಿವೆ. ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛವಾಗಿದ್ದ ರಸ್ತೆಗಳು ಮತ್ತೆ ಕಸ ತುಂಬಿಕೊಂಡು ತುಳುಕಾಡುತ್ತಿವೆ. 

ಸಾರ್ವಜನಿಕರು ಪುರಸಭೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಕ್ಯಾಮೆರಾ ಇದ್ದರೂ, ಅವುಗಳ ಮುಂದೆಯೇ ಕಸ ಸುರಿದು ಹೋಗುತ್ತಾರೆ. ಇದು ಪುರಸಭೆಗೂ ತಲೆನೋವಾಗಿ ಪರಿಣಮಿಸಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿನಿತ್ಯ ಪರಿಶೀಲಿಸಿ, ನಂತರ ಕ್ಯಾಮರಾದಲ್ಲಿ ಕಸ ಹಾಕಿದವರನ್ನು ಗುರುತಿಸಿ, ಪತ್ತೆಹಚ್ಚುವುದು ಅಷ್ಟು ಸುಲಭವಾಗಿಲ್ಲ. ಅಲ್ಲದೇ, ಅಳವಡಿಸಿರುವ ಕೆಲವು ಕ್ಯಾಮೆರಾಗಳೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ADVERTISEMENT

ರಸ್ತೆ ಬದಿಯಲ್ಲಿ ಕಸ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ಹಾಕುವ ಕಾರ್ಯ ನಿಡೆದೇ ಇದೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮನೆಮನೆಯಿಂದ ಕಸ ಸಂಗ್ರಹಿಸಲು ವ್ಯವಸ್ಥೆ ಮಾಡಿದರೂ ಕೂಡ ಬೀದಿ ಬದಿ ಕಸ ಸುರಿಯುವುದು ನಿಲ್ಲುತ್ತಿಲ್ಲ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ಕ್ಯಾಮರಾ ಅಳವಡಿಸಿರುವ ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಹಾಕುತ್ತಿರುವ ಸಾರ್ವಜನಿಕರನ್ನು ಗುರುತಿಸಿ, ಅಂತವರಿಗೆ ದಂಡ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹಲವು ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಕಸ ಹಾಕುವವರ ವಿರುದ್ಧ ಕ್ರಮ ಜರುಗಿಸಲಾಗುವುದು.
–ಮನಸ್ರೃತಿ, ಪುರಸಭೆ ಪರಿಸರ ಅಭಿಯಂತರರು
ಪ್ಲಾಸ್ಟಿಕ್ ಕವರಗಳನ್ನು ಬ್ಯಾನ್ ಮಾಡಿದ್ದರೂ ಜನರು ಅತಿ ಹೆಚ್ಚು ಪ್ಲಾಸ್ಟಿಕ್‌ ಬಳಸುತ್ತಿದ್ದಾರೆ. ಪ್ಲಾಸ್ಟಿಕ್‌ನ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ದಂಡ ಅಥವಾ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯೇ ಇದಕ್ಕೆ ಪರಿಹಾರವಲ್ಲ, ಜನ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು.
–ರಾಜು, ಬಿಡದಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.