ADVERTISEMENT

ರಾಜಕೀಯ ಅಧ್ಯಾಯ ಮುಗಿಯೋದು ನಮ್ಮದಾ? ಅವರದ್ದಾ? ಯೋಗೇಶ್ವರ್‌ಗೆ ಬಾಲಕೃಷ್ಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 9:52 IST
Last Updated 21 ಜೂನ್ 2024, 9:52 IST
<div class="paragraphs"><p>ಬಾಲಕೃಷ್ಣ</p></div>

ಬಾಲಕೃಷ್ಣ

   

ಮಾಗಡಿ (ರಾಮನಗರ): ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮುಗಿಯುವುದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಅಧ್ಯಾಯವೊ ಅಥವಾ ಯೋಗೇಶ್ವರ್ ಅಧ್ಯಾಯವೊ ಎಂಬುದನ್ನು ಚುನಾವಣೆಯಲ್ಲಿ ನೋಡೋಣ’ ಎಂದು ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು ನೀಡಿದರು.

‘ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರೆ ಡಿಕೆಶಿ ರಾಜಕೀಯ ಅಧ್ಯಾಯ ಮುಗಿಯಲಿದೆ’ ಎಂಬ ಯೋಗೇಶ್ವರ್ ಹೇಳಿಕೆ ಕುರಿತು, ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ತಲೆ ಕೆಟ್ಟ ರೀತಿಯಲ್ಲಿ ಮಾತನಾಡುವ ಯೋಗೇಶ್ವರ್ ಮಾತಿಗೆ ಮಹತ್ವ ಕೊಡಬೇಕಿಲ್ಲ. ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಇಂತಹ ರಾಜಕೀಯ ಗಿಮಿಕ್‌ನ ಮಾತುಗಳನ್ನಾಡುತ್ತಾರೆ. ಜನರೆದರು ನಮ್ಮನ್ನು ಖಳರನ್ನಾಗಿ ಮಾಡಲು ಹೊರಟ್ಟಿದ್ದಾರೆ. ಆದರೆ, ಅದ್ಯಾವುದು ನಡೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕೆಲಸ ಮಾಡಿ ಅವರು ಮತ ಕೇಳುವುದಿಲ್ಲ. ಬದಲಿಗೆ, ಇಲ್ಲ–ಸಲ್ಲದ ಮಾತುಗಳನ್ನಾಡಿ ಅನುಕಂಪ ಗಿಟ್ಟಿಸಿಕೊಂಡು ಜನರನ್ನು ಸೆಳೆಯುವುದೇ ಅವರ ಜಾಯಮಾನ. ಈಗ ಕುಮಾರಸ್ವಾಮಿ ನಮ್ಮ ನಾಯಕರು ಎನ್ನುತ್ತಿರುವ ಇದೇ ಯೋಗೇಶ್ವರ್, ಹಿಂದೆ ಕುಮಾರಸ್ವಾಮಿ ಅವರಿಗೆ ಏನೆಲ್ಲಾ ಬೈದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳದಲ್ಲಿ ಈಗಲೂ ಇವೆ. ಬೇಕಿದ್ದರೆ ನೋಡಬಹುದು’ ಎಂದು ಟಾಂಗ್ ನೀಡಿದರು.

‘ಉಪ ಚುನಾವಣೆಯಲ್ಲಿ ಅಭ್ಯರ್ಥಿ ಯಾರಾಗಬೇಕೆಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಅತ್ಯಂತ ಸಮರ್ಥ ಅಭ್ಯರ್ಥಿಯನ್ನೇ ಪಕ್ಷವು ಘೋಷಣೆ ಮಾಡಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.