ಕನಕಪುರ: ಬಸ್‌ನಲ್ಲೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಏಳು ತಿಂಗಳ ಗರ್ಭಿಣಿ ರಜಿಯಾ ಬಾನು ಆರೋಗ್ಯ ಪರೀಕ್ಷೆಗಾಗಿ ಸೋಮವಾರ ಹುಣಸನಹಳ್ಳಿ ಪ್ರಾಥಮಿಕ ಕೇಂದ್ರಕ್ಕೆ ಹೋಗಿದ್ದರು. ವೈದ್ಯರು ಹೊಸದುರ್ಗ ಆರೋಗ್ಯ ಕೇಂದ್ರಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಅಲ್ಲಿನ ವೈದ್ಯರು ಕೂಡ ಕನಕಪುರ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ.
ಬಸ್‌ನಲ್ಲಿ ಹೋಗುವಾಗ ಕಬ್ಬಳ್ಳಿ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದವರು ಹೆರಿಗೆಗೆ ಸಹಾಯ ಮಾಡಿದ್ದು ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕನಕಪುರ ಹೆರಿಗೆ ಆಸ್ಪತ್ರೆಗೆ ಕರೆ ತಂದು ದಾಖಲು ಮಾಡಲಾಗಿದೆ.
ನವಜಾತ ಶಿಶುಗಳು ಏಳು ತಿಂಗಳಿಗೆ ಜನಿಸಿವೆ. ನಿಗದಿತ ತೂಕಕ್ಕಿಂತ ಕಡಿಮೆ ಇದ್ದು ಐಸಿಯುನಲ್ಲಿ ಆರೈಕೆ ಮಾಡಲು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಮಹಿಳೆಗೆ ಈಗಾಗಲೇ ಎರಡು ಸಲ ಗರ್ಭಪಾತ ಆಗಿದೆ. ಮಹಿಳೆಯ ಅನಾರೋಗ್ಯ ಈ ಹೆರಿಗೆಗೆ ಕಾರಣವಾಗಿರಬಹುದು. ಮಹಿಳೆ ಸಂಬಂಧಿಗಳು ವೈದ್ಯರ ಶಿಫಾರಸು ನಿರ್ಲಕ್ಷ್ಯ ಮಾಡಿ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದ ಹೆರಿಗೆ ಆಗಿದೆ ಎಂದು ಕನಕಪುರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.