ADVERTISEMENT

ನೀರಿನ ಸಮಸ್ಯೆ: ಖಾಲಿ ಕೊಡ ಹಿಡಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 6:57 IST
Last Updated 20 ಜೂನ್ 2024, 6:57 IST
ಮಾಗಡಿ ಪಟ್ಟಣದ 14ನೇ ವಾಡರ್ಿನಲ್ಲಿ ನೀರಿನ ಸಮಸ್ಯೆ ವಿರುದ್ದ ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತ ಪಡಿಸಿದರು. 
ಮಾಗಡಿ ಪಟ್ಟಣದ 14ನೇ ವಾಡರ್ಿನಲ್ಲಿ ನೀರಿನ ಸಮಸ್ಯೆ ವಿರುದ್ದ ಖಾಲಿ ಕೊಡ ಹಿಡಿದು ಆಕ್ರೋಶ ವ್ಯಕ್ತ ಪಡಿಸಿದರು.    

ಮಾಗಡಿ: ಪಟ್ಟಣದ ಪುರಸಭಾ ವ್ಯಾಪ್ತಿಯ 14ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಬುಧವಾರ ವಾರ್ಡ್‌ನ  ಮಹಿಳೆಯರು ಖಾಲಿ ಕೊಡ ಹಿಡಿದು ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಿದರು.

14ನೇ ವಾರ್ಡ್‌ನ ಎರಡು ಬೀದಿಗಳಲ್ಲಿ ಹಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆ ನೀರು ಬಿಟ್ಟಾಗ ಕೆಳಬೀದಿಗೆ ನೀರು ಹೋಗುತ್ತಿದ್ದು, ವಾರ್ಡ್‌ನ ಮೇಲ್ಭಾಗದ ಬೀದಿಗಳಿಗೆ ನೀರು ಬರುತ್ತಿಲ್ಲ. ಈ ಬಗ್ಗೆ ವಾರ್ಡ್‌ನ ಪ್ರತಿನಿಧಿಯಾಗಿರುವ ಪುರಸಭಾ ಸದಸ್ಯರಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ ಎಂದು ಮಹಿಳೆಯರು ದೂರಿದರು.

‘ನೀರಿನ ಸಮಸ್ಯೆಯಿಂದಾಗಿ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಪುರಸಭೆಯ ಸಂಬಂಧಿಸಿದ ಅಧಿಆಖರಿಗಳು ಮನೆ ಬಾಗಿಲಿಗೆ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹೊಸ ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪುರಸಭೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ’ಎಂದು ಮಹಿಳೆಯರು ಎಚ್ಚರಿಸಿದರು.

ADVERTISEMENT

14ನೇ ವಾರ್ಡ್‌ನ ಎರಡು ಬೀದಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಒಂದು ಬೀದಿ ಎತ್ತರದಲ್ಲಿದ್ದು, ಮತ್ತೊಂದು ಬೀದಿ ತಗ್ಗಿನಲ್ಲಿದೆ. ತಗ್ಗಿನ ಬೀದಿಯಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಎತ್ತರದ ಬೀದಿಯಲ್ಲಿ ಸಮಸ್ಯೆ ತೀವ್ರರವಾಗಿದೆ. ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ನಾಗರಿಕರ ಸಮಸ್ಯೆ ಬಗೆಹರಿಸಬೇಕು ಎಂದು ಶಾರದಮ್ಮ ಮತ್ತು ಪ್ರಭಾ ಒತ್ತಾಯಿಸಿದರು.

ಪ್ರತಿಭಟಟನೆಯಲ್ಲಿ ಸಾಕಮ್ಮ, ಯಶೋದಮ್ಮ, ವಿಜಯಲಕ್ಷ್ಮಿ, ಲತಾ, ಶಾರದಮ್ಮ, ರಂಜಿತಾ, ಶಕ್ಕು ಸೇರಿದಂತೆ ಇತರರು ಇದ್ದರು.

ಮಾಗಡಿ ಪಟ್ಟಣದ ತಟವಾಳು ಮುಖ್ಯರಸ್ತೆಯ ವಿನ್ನರ್ಸ್ ಶಾಲೆಯ ತಿರುವಿನಲ್ಲಿ ಕಸ ಎಸೆಯಲಾಗಿದ್ದು ಬಿಡಾಡಿ ದನಗಳು ಹಾಗೂ ನಾಯಿಗಳ ಕಾಟದಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗಿ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. 
14ನೇ ವಾರ್ಡ್‌ನ ಕೆಲವು ಮನೆಗಳಿಗೆ ನೀರು ಬಾರದ ಬಗ್ಗೆ ದೂರು ಕೇಳಿಬಂದಿತ್ತು. ವಾಟರ್ ಮ್ಯಾನ್‌ಗೆ ಈ ಬಗ್ಗೆ ತಿಳಿಸಿದ್ದು, ನಾಳೆಯಿಂದ ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ರಿಯಾಜ್‌, ಪುರಸಭಾ ಸದಸ್ಯ, 14ನೇ ವಾರ್ಡ್ 14ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಅಧಿಕಾರಿಗಳ ಜತೆಗೆ ಚರ್ಚಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಶಿವರುದ್ರಯ್ಯ, ಮುಖ್ಯಾಧಿಕಾರಿ, ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.