ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮ ಜಾನಪದ ಸಮಿತಿ, ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆಯಲ್ಲಿ ಗಣೇಶ್ ಕೆಳಮನೆಯವರ ನಿರ್ದೇಶನದ ‘ಚೌಕಿ’ ಎಂಬ ಕಿರುಚಿತ್ರವು ಪ್ರಥಮ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ಈ ಚಿತ್ರತಂಡಕ್ಕೆ ₹ 25 ಸಾವಿರ ನಗದು ಪುರಸ್ಕಾರ, ಆಕರ್ಷಕ ಸ್ಮರಣಿಕೆ ನೀಡಲಾಯಿತು.
ನಗರದ ಕಂಟ್ರಿಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮುರ್ತಿ ಪ್ರಶಸ್ತಿ ಪ್ರದಾನ ಮಾಡಿದರು.
ಗುರುಪ್ರಸಾದ್ ದೇವಾಡಿ ಅವರ ನಿರ್ದೇಶನದ ‘ಹಕ್ಕೆಮನೆ’ ಚಿತ್ರಕ್ಕೆ ದ್ವಿತೀಯ ಪುರಸ್ಕಾರವಾಗಿ ₹ 15 ಸಾವಿರ ನಗದು, ಶಶಾಂಕ್ ನಾರಾಯಣ್ ನಿರ್ದೇಶನದ ‘ಪರಕಾಯ’ ಕಿರುಚಿತ್ರಕ್ಕೆ ತೃತೀಯ ಪುರಸ್ಕಾರ ₹ 10 ಸಾವಿರ ಹಾಗೂ ಆಕರ್ಷಕ ಸ್ಮರಣಿಕೆಗಳನ್ನು ಪ್ರದಾನ ಮಾಡಲಾಯಿತು. ದಾವಣಗೆರೆಯ ವೈದ್ಯಕೀಯ ವಿದ್ಯಾರ್ಥಿನಿ ದೀಕ್ಷಾ ಅವರ ನಿರ್ದೇಶನದ ಎಲ್.ಎಸ್. ಮೆಡಿಕಲ್ ಮಿರಾಕಲ್ ಕಿರುಚಿತ್ರಕ್ಕೆ ತೀರ್ಪುಗಾರರ ವಿಶೇಷ ಪುರಸ್ಕಾರ ರೂಪದಲ್ಲಿ ₹ 5 ಸಾವಿರ ನಗದು ಹಾಗೂ ಆಕರ್ಷಕ ಸ್ಮರಣಿಕೆ ನೀಡಲಾಯಿತು.
ಉಳಿದ ಪ್ರಶಸ್ತಿ- ವಿವರ: ಫನ್ಮಂಡ್ರಿ ಕ್ರಾಸ್, ಪರಿಧಿ, ಸ್ಟಡಿ ಹಾಲಿಡೇಸ್, ಯಾರಿವರವರು, ಸ್ಟೋರಿ ಆಫ್ ಟಸ್ಕರ, ನಿರ್ಮಾಣ ಚಿತ್ರಗಳು ತಲಾ ₹ 2 ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಯ ಪ್ರೋತ್ಸಾಹಕರ ಬಹುಮಾನ ಪ್ರಶಸ್ತಿಗೆ ಭಾಜನವಾದವು.
ವೈಯಕ್ತಿಕ ಪ್ರಶಸ್ತಿ ವಿಭಾಗ: ಎಸ್.ಆರ್. ಗಿರೀಶ್ (ಶ್ರೇಷ್ಠ ನಟ -ಯಾರಿವರವರು), ಸಂಧ್ಯಾ ಶಾಸ್ತ್ರಿ (ಶ್ರೇಷ್ಠ ನಟಿ -ಸ್ವಾರ್ಥ), ಶಶಾಂಕ್ (ಶ್ರೇಷ್ಠ ಸಂಕಲನ -ಪರಕಾಯ), ಉದಯ್ (ಶ್ರೇಷ್ಠ ಛಾಯಾಗ್ರಹಣ -ಫನ್ಮಂಡ್ರಿ ಕ್ರಾಸ್), ಗಣೇಶ್ ಕೆಳಮನೆ (ಶ್ರೇಷ್ಠ ನಿರ್ದೇಶನ - ಚೌಕಿ), ಗುರುಪ್ರಸಾದ್ ದೇವಾಡಿಗ (ಶ್ರೇಷ್ಠ ಸಂಗೀತ - ಹೆಕ್ಕೆಮನೆ), ಮಹಾಂತೇಶ್ ದೇವಗಿರಿ (ಶ್ರೇಷ್ಠ ಕಥೆ -ಪರಿಧಿ)ರವರು ಪ್ರಶಸ್ತಿ-, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 2 ಸಾವಿರ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ.
ರಾಜ್ಯದ ವಿವಿಧೆಡೆಯಿಂದ 54 ಕಿರುಚಿತ್ರಗಳು ಪಾಲ್ಗೊಂಡಿದ್ದವು. ತೀರ್ಪುಗಾರರಾಗಿ ಚಿತ್ರ ನಿರ್ದೇಶಕ ಬಿ. ಸುರೇಶ, ಬಿ.ಎಸ್. ಲಿಂಗದೇವರು, ಚಿತ್ರ ಸಾಹಿತಿ- ಕವಿ ಎಂ.ಎನ್. ವ್ಯಾಸರಾವ್ ಅವರು ಪಾಲ್ಗೊಂಡಿದ್ದರು.
ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಡಾ. ಅಶೋಕ್ ಪೈ, ಬಿ.ಸುರೇಶ, ಬಿ.ಎಸ್. ಲಿಂಗದೇವರು, ಯುಗಧರ್ಮ ರಾಮಣ್ಣ ಸೇರಿದಂತೆ ವಿವಿಧ ಬಹುಮಾನಗಳ ಪ್ರಾಯೋಜಕರು ಪ್ರದಾನ ಮಾಡಿದರು. ಕಿರುಚಿತ್ರ ಸ್ಪರ್ಧೆ ಸಂಚಾಲಕ ಡಿ.ಎಸ್. ಅರುಣ್, ವೈದ್ಯ, ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.