ಸೊರಬ: ಬೆಳ್ಳಿ, ಬಂಗಾರ ಹೊಂದಿದ ಮಠವನ್ನು ಶ್ರೀಮಂತ ಮಠ ಎನ್ನಲು ಸಾಧ್ಯವಿಲ್ಲ. ಹೆಚ್ಚು ಭಕ್ತ ಪರಂಪರೆ ಹೊಂದಿದ ಮಠವೇ ಶ್ರೀಮಂತ ಮಠ ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಂಡಗಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ನಡೆದ ಗುಗ್ಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠ, ಮಂದಿರಗಳಲ್ಲಿ ಧಾರ್ಮಿಕ ವಿಚಾರಗಳು ಗಟ್ಟಿಯಾಗಿ ನೆಲೆಗೊಳ್ಳಲು ಸಕಲ ಭಕ್ತ ಸಮೂಹ ಕಾರಣವಾಗುತ್ತದೆ. ಭಕ್ತರ ಸಹಕಾರದಿಂದ ಜಡೆ ಮಠದಲ್ಲಿ 25 ವರ್ಷ ಪೂರೈಸಲು ಸಾಧ್ಯವಾಗಿದೆ. ಗುರುವಿನ ಅನುಗ್ರಹದಿಂದ ಮಾತ್ರ ವ್ಯಕ್ತಿ ಸಾಧನೆ ಮಾಡಬಹುದು ಎಂದರು.
ಭಕ್ತರು, ಮಠ, ಮಂದಿರಗಳ ನಡುವೆ ಸಂಬಂಧ ಗಟ್ಟಿಗೊಂಡಾಗ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಹುಬ್ಬಳ್ಳಿಯ ಷಡಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರವೀಂದ್ರನಾಥ, ಗುರುನಾಥ ನಾಯಕ, ವಿಶ್ವನಾಥ, ಅಶೋಕ ನಾಯಕ ಅಂಡಗಿ, ಜಯಶೀಲಗೌಡ, ಒಡೆಯರ್, ಮಲ್ಲಿಕಾರ್ಜುನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.