ADVERTISEMENT

ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ: ಕಾಂಗ್ರೆಸ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 10:39 IST
Last Updated 19 ಸೆಪ್ಟೆಂಬರ್ 2018, 10:39 IST

ಶಿವಮೊಗ್ಗ: ಮಲೆನಾಡಿನ ಬಡ ರೈತರಿಗೆ, ಬುಡಕಟ್ಟು, ಅರಣ್ಯ ವಾಸಿಗಳಿಗೆ, ಸಾಂಪ್ರಾದಾಯಿಕ ಕೃಷಿಕರಿಗೆ ಕಂಟಕವಾಗಿರುವಕರ್ನಾಟಕಭೂ ಕಬಳಿಕೆ ನಿಷೇಧ ಕಾಯ್ದೆಗೆತಿದ್ದುಪಡಿ ತರಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಹೆಗ್ಡೆಆಗ್ರಹಿಸಿದರು.

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ–1964 ಮತ್ತು 2011 ಮಲೆನಾಡಿನ ಭಾಗದ ಜನರಿಗೆ ಕಂಟಕವಾಗಿವೆ. ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ 71,316 ಎಕರೆ ಜಮೀನು ಒತ್ತುವರಿಯಾಗಿದೆಎಂದು ಗುರುತಿಸಿದೆ. ತಕ್ಷಣಈ ಒತ್ತುವರಿ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ. ರೈತರು ಕಿರುಕುಳ ಅನುಭವಿಸುತ್ತಿದ್ದಾರೆ ಎಂದುಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನಗರ ಪ್ರದೇಶದ ಒತ್ತುವರಿ ತಡೆಯಲು ಈ ಕಾಯ್ಜಾದೆ ರಿಗೆ ತರಲಾಗಿತ್ತು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಕಬಳಿಸುತ್ತಿರುವ ಭೂಗಳ್ಳರನ್ನು ಮಟ್ಟ ಹಾಕಲು ಜಾರಿಗೆ ತರಲಾಗಿತ್ತು.ಇದೇ ಕಾನೂನು ಮಲೆನಾಡಿನ ಸಾಂಪ್ರಾದಾಯಕ ಕೃಷಿಕರಿಗೂ ಅನ್ವಯಗೊಳಿಸುವಂತೆ ಜಾರಿಮಾಡಿರುವುದು ವಿಪರ್ಯಾಸ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಈ ಕಾಯ್ದೆ ಪ್ರಕಾರ ಮಲೆನಾಡಿಗರು ಅರಣ್ಯ ಅಥವಾ ಕಂದಾಯ ಭೂಮಿಯಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ, ಕೊಟ್ಟಿಗೆ ಮನೆಗಳು ಇರುವಂತಿಲ್ಲ, ಕಣಗಳನ್ನು ಮಾಡುವುದು ತಪ್ಪು.ತುಳಸಿಕಟ್ಟೆ ಕಟ್ಟಿದರೂ ಕೂಡ ಭೂ ಕಬಳಿಕೆ ಕೇಸು ಹಾಕಿ ಜೈಲಿಗೆ ಕಳುಹಿಸಲಾಗುತ್ತದೆ. ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪಅವರು ಮುಖ್ಯಮಂತ್ರಿಯಾಗಿದ್ದಾಗ 2009ರಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು. ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಕೇಂದ್ರದ ಅನುಮತಿ ಇಲ್ಲದೇ ಹಕ್ಕುಪತ್ರ ನೀಡದಂತೆ ಆದೇಶ ಹೊರಡಿಸಿದ್ದರು. ಈ ಆದೇಶವೇಇಂದಿನ ಸ್ಥಿತಿಗೆ ಕಾರಣಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲೆನಾಡಿನಬಡವರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಕೊಟ್ಟಿಗೆ ಕಟ್ಟಿದ್ದಾರೆ. ಕಣಗಳಿವೆ. ಈಗ ಎಲ್ಲರನ್ನೂ ಒಕ್ಕಲೆಬ್ಬಿಸಲು ಸಿದ್ಧತೆ ನಡೆದಿದೆ.ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿತಕ್ಷಣ ಮಧ್ಯ ಪ್ರವೇಶಿಸಬೇಕು.ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕುಎಂದು ಒತ್ತಾಯಿಸಿದರು.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2015ರಲ್ಲಿ ಒಂದು ಆದೇಶ ಹೊರಡಿಸಿ,3 ಎಕರೆಗಿಂತ ಕಡಿಮೆ ಇರುವ ಜಮೀನು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಜರುಗಿಸಬಾರದು. ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಅರ್ಜಿಗಳು ಇತ್ಯರ್ಥವಾಗದೇ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದ್ದರು. ಈ ಆದೇಶದಿಂದ ಬಡ ರೈತರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಇದಕ್ಕೆ ಅಂದಿನ ಸಚಿವರಾದ ಆರ್.ವಿ. ದೇಶಪಾಂಡೆ, ಕಾಗೋಡು ತಿಮ್ಮಪ್ಪಕಾರಣ ಎಂದು ಸ್ಮರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಎಸ್‌ಯುಐನ ಬಾಲಾಜಿ, ಗಿರೀಶ್, ಸುಮತಿ ಕರ್ಕಡ, ಅಬ್ದುಲ್ ಸತ್ತರ್ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.