ADVERTISEMENT

ದಾರ್ಶನಿಕರ ಸಂದೇಶಗಳು ಇಂದಿನ ಅಗತ್ಯ: ಪ್ರೊ.ಬಿ.ಪಿ. ವೀರಭದ್ರಪ್ಪ

ಡಿಎಸ್ಎಸ್ ನೇತೃತ್ವದಲ್ಲಿ ಬುದ್ಧಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:27 IST
Last Updated 17 ಮೇ 2022, 4:27 IST
ಭದ್ರಾವತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುದ್ಧಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ‘ನಮ್ಮ ನಡೆ ಬುದ್ಧನೆಡೆಗೆ’ ಕಾರ್ಯಕ್ರಮದಲ್ಲಿ ಧಮ್ಮಚಾರಿ ಶೇಖರ್ ನಾಯ್ಕ ಪೂಜೆ ನೆರವೇರಿಸಿದರು.
ಭದ್ರಾವತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುದ್ಧಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ‘ನಮ್ಮ ನಡೆ ಬುದ್ಧನೆಡೆಗೆ’ ಕಾರ್ಯಕ್ರಮದಲ್ಲಿ ಧಮ್ಮಚಾರಿ ಶೇಖರ್ ನಾಯ್ಕ ಪೂಜೆ ನೆರವೇರಿಸಿದರು.   

ಭದ್ರಾವತಿ: ‘ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಭಗವಾನ್ ಬುದ್ಧ ಅವರ ದಾರ್ಶನಿಕ ಚಿಂತನೆಗಳ ಸಾರ ಇಂದಿನ ಅಗತ್ಯ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುದ್ಧ ಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ‘ನಮ್ಮ ನಡೆ ಬುದ್ಧನೆಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬುದ್ಧ, ಬಸವ, ಅಂಬೇಡ್ಕರ್ ಎಲ್ಲರ ಆಶಯಗಳು ಚಿಂತನೆಗಳು ಒಂದೇ ಆಗಿದ್ದು, ಅದರ ಮೂಲಕ ಸಮ ಸಮಾಜ ಸ್ಥಾಪಿಸುವ ಗುರಿಯನ್ನು ಹೊಂದಿದ್ದರು’ ಎಂದರು.

ADVERTISEMENT

‘ಇಂದಿನ ದಿನದಲ್ಲಿ ಇಂತಹ ಮಹಾತ್ಮರ ಚಿಂತನೆಗಳು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನೀಯ ಎನಿಸುವಂತೆ ತಿಳಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ವಿಶ್ರಾಂತ ಉಪನ್ಯಾಸಕ ಪ್ರೊ.ಎಂ.ಚಂದ್ರಶೇಖರಯ್ಯ, ‘ಅಂಬೇಡ್ಕರ್ ಅವರ ಸಮಾನತೆಯ ಬದುಕಿನ ಸಿದ್ಧಾಂತಕ್ಕೆ ಒಗ್ಗುವಂತಹ ಕಲ್ಪನೆಗಳು ಬೌದ್ಧಧರ್ಮದ ಆಚರಣೆಯಲ್ಲಿ ಇದ್ದ ಕಾರಣ ಅದನ್ನು ಸ್ವೀಕರಿಸಲು ಬಾಬಾಸಾಹೇಬ್ ಮುಂದಾದರು. ಇದು ಇಂದಿನ ಅಗತ್ಯವೂ ಆಗಿದೆ’ ಎಂದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಖಜಾಂಚಿ ಸತ್ಯ, ಮಾಜಿ ನಗರಸಭಾಧ್ಯಕ್ಷ ಬಿ.ಕೆ. ಮೋಹನ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಚನ್ನಪ್ಪ ಉಪಸ್ಥಿತರಿದ್ದರು. ಕೆ.ಎ. ರಾಜಕುಮಾರ್ ಸ್ವಾಗತಿಸಿದರು. ಸಿ.ಜಯಪ್ಪ ನಿರೂಪಿಸಿದರು. ಸತ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ. ವಿನೋದ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.