ADVERTISEMENT

ಶಿವಮೊಗ್ಗ: ನಗರ ಸಾರಿಗೆ ಬಸ್‌ ಪಲ್ಟಿ; 17 ಜನ ಪ್ರಯಾಣಿಕರಿಗೆ ಗಾಯ

ಗಾಯಾಳುಗಳಿಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 15:24 IST
Last Updated 16 ಅಕ್ಟೋಬರ್ 2024, 15:24 IST
ಶಿವಮೊಗ್ಗ ವಿನೋಬನಗರದ ಬೊಮ್ಮನಕಟ್ಟೆಯ ರೈಲ್ವೆ ಗೇಟ್‌ ಪಕ್ಕದ ಚರಂಡಿಗೆ ಉರುಳಿರುವ ನಗರ ಸಾರಿಗೆ ಬಸ್‌
ಶಿವಮೊಗ್ಗ ವಿನೋಬನಗರದ ಬೊಮ್ಮನಕಟ್ಟೆಯ ರೈಲ್ವೆ ಗೇಟ್‌ ಪಕ್ಕದ ಚರಂಡಿಗೆ ಉರುಳಿರುವ ನಗರ ಸಾರಿಗೆ ಬಸ್‌    

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ನಗರ ಸಾರಿಗೆ ಬಸ್ಸೊಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚರಂಡಿಗೆ ಬಿದ್ದ ಘಟನೆ ವಿನೋಬನಗರದ ಬೊಮ್ಮನಕಟ್ಟೆಯ ರೈಲ್ವೆ ಗೇಟ್‌ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. 

ಮಕ್ಕಳು ಸೇರಿದಂತೆ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ತರಿಚಿದ ಗಾಯ ಆಗಿದ್ದವರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. ಕೈ, ಕಾಲು ಹಾಗೂ ಕುತ್ತಿಗೆಗೆ ಹೆಚ್ಚಿನ ಪೆಟ್ಟಾಗಿರುವ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಸ್‌ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. 

ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಿಂದ ಗೋಪಾಳಕ್ಕೆ ರೈಲ್ವೆ ಗೇಟ್‌ನ ಪಕ್ಕದ ರಸ್ತೆಯಲ್ಲಿ ದಾಟುವಾಗ ರಸ್ತೆಯ ನಡುವೆ ಹಂಪ್‌ ಎದುರಾಗಿದೆ.  ವೇಗವಾಗಿ ಬಸ್‌ ಓಡಿಸುತ್ತಿದ್ದ ಚಾಲಕನಿಗೆ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಪಕ್ಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಚರಂಡಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. 

ADVERTISEMENT

ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

ಎಲ್ಲ ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗಿದೆ. 13 ಜನರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು ತೆರಳಿದ್ದಾರೆ. ಇನ್ನೂ 4 ಜನರು ಒಳ ರೋಗಿಯಾಗಿ ದಾಖಲಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ.
ಡಾ.ಟಿ.ಡಿ.ತಿಮ್ಮಪ್ಪ ಅಧೀಕ್ಷಕ ಮೆಗ್ಗಾನ್‌ ಆಸ್ಪತ್ರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.