ADVERTISEMENT

ಹೊಳೆಹೊನ್ನೂರು: ದನದ ಮಾಂಸ ತ್ಯಾಜ್ಯ ಸಾಗಿಸುತ್ತಿದ್ದ ಕ್ಯಾಂಟರ್‌ ವಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:23 IST
Last Updated 13 ಜೂನ್ 2024, 15:23 IST
ಹೊಳೆಹೊನ್ನೂರಿನ ಸಮೀಪದ ಕೂಡ್ಲಿ ಕ್ರಾಸ್ ಬಳಿ ದನದ ಮಾಂಸದ ತ್ಯಾಜ್ಯ ಸಾಗಿಸುತ್ತಿದ್ದ ಲಾರಿ.
ಹೊಳೆಹೊನ್ನೂರಿನ ಸಮೀಪದ ಕೂಡ್ಲಿ ಕ್ರಾಸ್ ಬಳಿ ದನದ ಮಾಂಸದ ತ್ಯಾಜ್ಯ ಸಾಗಿಸುತ್ತಿದ್ದ ಲಾರಿ.   

ಹೊಳೆಹೊನ್ನೂರು: ಸಮೀಪದ ಕೂಡ್ಲಿ ಕ್ರಾಸ್ ಬಳಿ ದನದ ಮಾಂಸದ ತ್ಯಾಜ್ಯ ತುಂಬಿದ ಕ್ಯಾಂಟರ್‌ ಅನ್ನು ಪೊಲೀಸರು ಗುರುವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

‘ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕ್ಯಾಂಟರ್‌ ಲೋಡ್‌ನಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಯುವಕರಿಬ್ಬರು ಕ್ಯಾಂಟರ್‌ ಅನ್ನು ಬೆನ್ನಟಿ ಹಿಡಿಯಲು ಮುಂದಾದಾಗ ಬೈಕ್ ಸವಾರರ ಮೇಲೆ ಕ್ಯಾಂಟರ್‌ ಹತ್ತಿಸುವ ಪ್ರಯತ್ನ ನಡೆಯಿತು. ಇದರಿಂದ ಕೋಪಗೊಂಡ ಯುವಕರು ವಾಹನವನ್ನು ತಡೆದು ನಿಲ್ಲಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ ವಾಹನವನ್ನು ವಶಕ್ಕೆ ಪಡೆದುಕೊಂಡರು’ ಎಂದು ಪೊಲೀಸರು ಮಾಹಿತಿ ನೀಡಿದರು.

ದನದ ಮಾಂಸ ತ್ಯಾಜ್ಯ ಸಾಗಣೆ ಸುದ್ದಿ ಹರಡಿ ಕೂಡ್ಲಿ ಕ್ರಾಸ್‌ನಲ್ಲಿ ಜನ ಜಂಗುಳಿ ಉಂಟಾಗಿತ್ತು. ವಾಹನಗಳನ್ನು ನಿಯಂತ್ರಸುವಲ್ಲಿ ಪೊಲೀಸರು ಹೈರಾಣಾದರು.

ADVERTISEMENT

ಪಕ್ಕದ ಚನ್ನಗಿರಿಯ ಕಸಾಯಿ ಖಾನೆಗಳಿಂದ ದನದ ಮಾಂಸದ ಕೊಂಬು ಮೂಳೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಂಗಳೂರಿನ ಸಂಸ್ಕರಣಾ ಘಟಕಕ್ಕೆ ಸಾಗಿಸಲಾಗುತ್ತಿತ್ತು. ಕ್ಯಾಂಟರ್‌ ಚಾಲಕ ಕಂಪನಿಗೆ ಸಂಬಂಧಿಸಿದ ಜಿಎಸ್‌ಟಿ ಬಿಲ್‌ಗಳನ್ನು ಪೊಲೀಸರಿಗೆ ನೀಡಿದ್ದು ತಪಾಸಣೆ ನಡೆಸಿದ್ದಾರೆ. ದನದ ಮೂಳೆಗಳನ್ನು ಪುಡಿ ಮಾಡಿ ರಾಸಾಯನಿಕಗಳಿಗೆ ಬಳಸುವ ಉದ್ದೇಶದಿಂದ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಲಾರಿಯಿಂದ ಕೆಟ್ಟ ವಾಸನೆ ಬರುತ್ತಿರುವ ಕಾರಣ ಪಟ್ಟಣದ ಹೊರವಲಯದ ಭದ್ರಾ ನದಿಯ ಬಳಿ ನಿಲ್ಲಿಸಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಯಲ್ಲಿಯಲ್ಲಿರುವ ದನದ ಮಾಂಸ ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.