ಶಿವಮೊಗ್ಗ:ರಾಜ್ಯದ ಜನರ ಕಷ್ಟ ನನೆದು ಕಣ್ಣೀರು ಸುರಿಸಿದ್ದೇನೆ. ಅವರಂತೆ ಜನರಿಗೆ ಕಣ್ಣೀರು ತರಿಸುವ ಕೆಲಸ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡರನ್ನು ಕುಟುಕಿದರು.
ಸೊರಬ ತಾಲ್ಲೂಕು ಆನವಟ್ಟಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಎಸ್.ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರಸಭೆಗೂ ಮೊದಲು ಸುದ್ದಿಗಾರರ ಜತೆ ಅವರು ಮಾತನಾಡಿದರು.
ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಚುನಾವಣೆ ಇದ್ದರೂಏಳೆಂಟು ದೃಶ್ಯ ಮಾಧ್ಯಮಗಳು ಮಂಡ್ಯ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿದ್ದವು. ಪುತ್ರ ನಿಖಿಲ್‌ಕುಮಾರಸ್ವಾಮಿಗೆ ರಾಷ್ಟ್ರೀಯ ನಾಯಕರಿಗೆ ನೀಡುವಷ್ಟು ಪ್ರಚಾರ ನೀಡಿದರು. ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ವ್ಯಂಗ್ಯವಾಡಿದರು.
ಅಂಬರೀಷ್‌ಪಾರ್ಥಿವ ಶರೀರ ಮಂಡ್ಯಕ್ಕೆ ತರುವ ವಿಚಾರದಲ್ಲಿ ಅಭಿಷೇಕ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಹುಡುಗರು ಏನೇನೋ ಮಾತನಾಡುತ್ತಾರೆ. ಮಂಡ್ಯದ ಜನರು ಸ್ವಾಭಿಮಾನ ಸೆರಗಿಗೆ ಮರುಳಾಗುವದಿಲ್ಲ. ಜಿಲ್ಲೆಯ ಸ್ವಾಭಿಮಾನ ಉಳಿಸಲು ಅವರು ಏನು ಮಾಡಿದ್ದಾರೆ ಎನ್ನುವುದುಜನರಿಗೆಗೊತ್ತಿದೆ. ಅವರ ಪತಿ ಮಂಡ್ಯವನ್ನು ಸಿಂಗಾಪುರಮಾಡುವ ಸಂಕಲ್ಪ ಮಾಡಿದ್ದರೆ ಯಾರು ತಡೆದಿದ್ದರು? ಮಂಡ್ಯದ ಜನರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುದಿಲ್ಲ. ತಮ್ಮನ್ನು ಎಂದೂ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದ ದಿನದಿಂದಲೂ ಬಿ.ಎಸ್.ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಬೀಳಿಸಲು ಶತಪ್ರಯತ್ನ ಮಾಡುತ್ತಿದ್ದಾರೆ. ಈಗ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ಮೇ 24 ನಿಗದಿ ಮಾಡಿಕೊಂಡಿದ್ದಾರೆ. ಶಾಸಕರಿಗೆ ₨ 10 ಕೋಟಿ, ₨ 20 ಕೋಟಿ ಆಮಿಷ ಒಡ್ಡಲು ಹಣ ಎಲ್ಲಿಂದ ಬಂತು? ಅದು ಅವರ ರೈಸ್‌ಮಿಲ್ ಹಣವೇ? ಶಿಕ್ಷಣ ಸಂಸ್ಥೆಗಳ ಹಣವೇ ಎಂಬದನ್ನು ಬಹಿರಂಗ ಮಾಡಬೇಕು. ನಾವು ಇವರಂತೆ ವಾಮಮಾರ್ಗದಲ್ಲಿ ಹಣ ಮಾಡಿ ಮಕ್ಕಳಿಗೆ ಸಾಲುಸಾಲು ಶಿಕ್ಷಣ ಸಂಸ್ಥೆಕಟ್ಟಿಕೊಟ್ಟಿಲ್ಲಎಂದು ಛೇಡಿಸಿದರು.
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಒಂದು ವರ್ಷದಲ್ಲಿ ಎರಡು ಬಾರಿ ಸೋತಿದ್ದಾರೆ. ಸೋತರೂ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಸಿದ್ದಾರೆ. ಮೂರನೇ ಬಾರಿಯಾದರೂ ಅವರಿಗೆ ಅವಕಾಶ ನೀಡಿ. ಶಂಕುಸ್ಥಾಪನೆಗೆ ಸಂಸದರಾಗಿ ಭಾಗವಹಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಡೈರಿ ವಿಚಾರ ಚರ್ಚಿಸಲು ಹೋಗಿದ್ದರು!
ಯಡಿಯೂರಪ್ಪ ಅವರು ಮೂರು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಶಿಕಾರಿಪುರ, ಸೊರಬ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ. ಮಧುಬಂಗಾರಪ್ಪ ಅವರ ಕೋರಿಕೆಯಂತೆ ₹ 195 ಕೋಟಿ ಹಣ ನೀಡಿದ್ದೇವೆ. ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಜಲಸಂಪನ್ಮೂಲ ಸಚಿವರ ಮನೆಗೆ ಹೋಗಿ ಮನವಿ ಮಾಡಿದ್ದಕ್ಕೆ ಹಣ ಬಿಡುಗಡೆಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಭವಿಷ್ಯ ಅವರು ಡೈರಿ ವಿಚಾರ ಚರ್ಚೆ ಮಾಡಲು ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿರಬೇಕು ಎಂದು ಶಿಕಾರಿಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಟುಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.