ADVERTISEMENT

ಮಾಂಸ ಖರೀದಿಗೆ ಮುಗಿಬಿದ್ದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 12:45 IST
Last Updated 26 ಮಾರ್ಚ್ 2020, 12:45 IST

ಶಿವಮೊಗ್ಗ:ಯುಗಾದಿ ಮುಗಿಸಿದ ಜನರು ಇಂದು ವರ್ಷದ ತೊಡಕು ನೆಪವಾಗಿಟ್ಟುಕೊಂಡು ಮಾಂಸ ಖರೀದಿಗೆ ಮುಗಿಬಿದ್ದರು.

ವಿನೋಬನಗರ, ಮೀನುಮಾರುಕಟ್ಟೆ, ದುರ್ಗಿಗುಡಿ, ಕೆ.ಆರ್.ಪುರಂ ಮೊದಲಾದ ಭಾಗಗಳಲ್ಲಿಮಾಂಸ ಖರೀದಿ ಜೋರಾಗಿತ್ತು.ಬೇಡಿಕೆ ಹೆಚ್ಚಳದ ದುರ್ಲಾಭ ಪಡೆದಮಾಂಸದ ಅಂಗಡಿ ಮಾಲೀಕರು ಕೆ.ಜಿ. ಮಾಂಸಕ್ಕೆ700 ರು. ಇಂದು 1000 ರು. ತನಕ ಮಾರಾಟ ಮಾಡಿದರು.

ಅಂತರ ಕಾಪಾಡಿಕೊಳ್ಳಲು ಸುರಕ್ಷಾ ಗೆರೆ ಪಟ್ಟಿಯ ಒಳಗೆ ನಿಂತು ಖರೀದಿಸುವಂತೆ ಬಹುತೇಕ ಜನರು ತಾಕೀತು ಮಾಡುತ್ತಿದ್ದರು.ಆದರೆ, ಯಾರೂ ಅತ್ತ ನಿಗಾ ವಹಿಸಲೇ ಇಲ್ಲ. ದಿನಸಿ ಅಂಗಡಿಗಳೂತೆರೆದಿದ್ದವು. ಅಲ್ಲಿಯೂ ನೂಕುನುಗ್ಗಲು ಇತ್ತು.ಕೆಲವು ಅಧಿಕಾರಿಗಳು ಬಾಗಿಲು ಮುಚ್ಚಿಸುತ್ತಿದ್ದರೆ, ಇನ್ನು ಕೆಲವರು ಸರತಿ ಸಾಲಿನಲ್ಲಿ ನಿಲ್ಲಿಸಿ ಖರೀದಿಗೆ ಅವಕಾಶ ಮಾಡಿಕೊಟ್ಟರು.

ADVERTISEMENT

ಔಷಧ ಅಂಗಡಿಗಳಲ್ಲೂಜನ ಸಂದಣಿ ಇತ್ತು.ಕೆಲವು ಭಾಗಗಳಲ್ಲಿ ಜನರು ಬೆಳಗಿನ ವಾಯುವಿಹಾರ ಮಾಡಿದರು. ಮಕ್ಕಳನ್ನೂ ಕರೆತಂದಿದ್ದರು. ಲಕ್ಷ್ಮೀ ಚಿತ್ರಮಂದಿರದ ಬಳಿ ತರಕಾರಿ ಖರೀದಿಸಲು ಜನ ದಟ್ಟಣೆ ಕಂಡು ಬಂತು.

ಮಧ್ಯಾಹ್ನದವರೆಗೂ ದ್ವಿಚಕ್ರ ವಾಹನ, ಕಾರುಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಓಡಾಡುತ್ತಲೇ ಇದ್ದರು. ಮಧ್ಯಾಹ್ನದ ನಂತರ ಸಂಚಾರ ಸಂಪೂರ್ಣ ನಿಯಂತ್ರಣದಲ್ಲಿತ್ತು.ಸಂಜೆಯ ವೇಳೆಗೆ ರಸ್ತೆಗಿಳಿದ ಜನರಿಗೆ ಪೊಲೀಸರುಲಾಠಿ ರುಚಿ ತೋರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.