ಸಾಗರ: ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜಾತ್ರೆಯ ಸೊಬಗು ಹೆಚ್ಚುತ್ತದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಗಣಪತಿ ಜಾತ್ರೆಯ ಅಂಗವಾಗಿ ಐದು ದಿನಗಳ ಕಾಲ ಏರ್ಪಡಿಸಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ನಾಡಿನ ಎಲ್ಲೆಡೆ ಜಾತ್ರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುವ ಪ್ರತೀತಿ ಇದೆ. ಅದನ್ನು ಮುಂದುವರಿಸುವ ಅಗತ್ಯವಿದೆ.ಜಾತ್ರೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರಿಂದ ಸ್ಥಳೀಯ ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಈ ಮೂಲಕ ಕಲಾವಿದರ ಪ್ರತಿಭೆ ಅನಾವರಣಗೊಳ್ಳುತ್ತದೆ. ಕಲೆಯ ಬೆಳವಣಿಗೆಗೆ ಇದು ಪೂರಕವಾದ ಅಂಶ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಟಿ.ಡಿ.ಮೇಘರಾಜ್, ಕುಸುಮಾ ಸುಬ್ಬಣ್ಣ, ಪ್ರಮುಖರಾದ ವಿ.ಟಿ.ಸ್ವಾಮಿ, ಐ.ವಿ.ಹೆಗಡೆ, ಪುರುಷೋತ್ತಮ್, ಶಿವಮೂರ್ತಿ, ಈಶ್ವರ,ರಂಗಪ್ಪ ಇದ್ದರು.
ಜೆ.ಭೀಮಣ್ಣ ಪ್ರಾರ್ಥಿಸಿದರು. ಜಿ.ನಾಗೇಶ್ ಸ್ವಾಗತಿಸಿದರು. ಲೋಕೇಶ್ ಕುಮಾರ್ ವಂದಿಸಿದರು. ಸಂತೋಷ್ ಶೇಟ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.