ADVERTISEMENT

ಶಿವಮೊಗ್ಗ: ನ.26ಕ್ಕೆ ದೀವರ ಸಾಂಸ್ಕೃತಿಕ ವೈಭವ

ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ, ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 15:54 IST
Last Updated 23 ನವೆಂಬರ್ 2023, 15:54 IST

ಶಿವಮೊಗ್ಗ: ಧೀರ ದೀವರ ಬಳಗ ಹಾಗೂ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಇಲ್ಲಿನ ಈಡಿಗ ಭವನದಲ್ಲಿ ನ.26 ರಂದು ಬೆಳಿಗ್ಗೆ 10 ಗಂಟೆಗೆ ‘ದೀವರ ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ಜರುಗಲಿದೆ ಎಂದು ಧೀರ ದೀವರ ಬಳಗದ ಸಂಚಾಲಕ ಸುರೇಶ್ ಕೆ.ಬಾಳೆಗುಂಡಿ ಹೇಳಿದರು.

ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ, ‘ಚಿತ್ತಾರಗಿತ್ತಿ’ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ‘ಧೀರ ದೀವರು’ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್.ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಅಂತರಾಷ್ಟ್ರೀಯ ಜಾನಪದ (ಡೊಳ್ಳುಕುಣಿತ) ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ‘ಧೀರ ದೀವರು’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ADVERTISEMENT

ಸಾರಗನಜೆಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಸ್ವಾಮೀಜಿ ಹಾಗೂ ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಎಸ್.ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಅತಿಥಿಗಳಾಗಿ ಭಾಗವಹಿಸುವರು. ದೀವರ ಸಾಂಕ್ಕೃತಿಕ ವೈಭವ ಸಂಚಾಲಕ ನಾಗರಾಜ್ ನೇರಿಗೆ ಉಪಸ್ಥಿತರಿರುವರು ಎಂದರು.

ಸುರೇಶ್ ಕೆ.ಬಾಳೆಗುಂಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಸೆ ಚಿತ್ತಾರ ಕಲಾವಿದ ಸಿರಿವಂತೆ ಚಂದ್ರಶೇಖರ್ ಸಮರೋಪ ನುಡಿ ಆಡುವರು. ಜಿಲ್ಲಾ ಉಸ್ತುವರಿ ಸಚಿವ ಎಸ್.ಮಧುಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ಟಿ.ನಾಯ್ಕ್, ಕೆಎಎಸ್ ಅಧಿಕಾರಿಗಳಾದ ಕೆ.ಚೆನ್ನಪ್ಪ, ಎಚ್.ಕೆ.ಕೃಷ್ಣಮೂರ್ತಿ, ಆರ್ಯ ಈಡಿಗ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಶ್ರೀಧರ್ ಆರ್.ಹುಲ್ತಿಕೊಪ್ಪ, ಜಿ.ಡಿ.ನಾರಾಯಣಪ್ಪ, ರಾಜನಂದಿನಿ ಕಾಗೋಡು, ಗೀತಾಂಜಲಿ ದತ್ತಾತ್ರೇಯ, ಅರವಿಂದ ಕರ್ಕಿಕೋಡಿ ಭಾಗವಹಿಸುವರು ಎಂದರು.

ಸಮಾಜದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಲಾಪ್ರದರ್ಶನ ನಡೆಯಲಿದೆ ಎಂದರು. ಮಾಹಿತಿಗೆ 9341110728 ಸಂಪರ್ಕಿಸಬಹುದು.

ಬಳಗದ ಲಕ್ಷ್ಮೀಕಾಂತ್ ಚಿಮಣೂರು, ಕೃಷ್ಣಮೂರ್ತಿ ಹಿಲ್ಲೋಡಿ, ಕಲಕೋಡು ರಾಮಕೃಷ್ಣ, ಜಯದೇವಪ್ಪ, ಪುನಿತ್ ಎಲ್.ಹೆಬ್ಬೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.