ADVERTISEMENT

ಗಾಡಿಕೊಪ್ಪ | ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಗ್ರಾಮ ಆಡಳಿತಾಧಿಕಾರಿ

ಗಾಡಿಕೊ‍ಪ್ಪ: ಜಮೀನಿನ ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 16:20 IST
Last Updated 30 ಮೇ 2024, 16:20 IST
ಜಿ.ಸುರೇಶ
ಜಿ.ಸುರೇಶ   

ಶಿವಮೊಗ್ಗ: ಜಮೀನಿನ ಖಾತೆ ಮಾಡಿಕೊಡಲು ₹ 6,000 ಲಂಚ ಪಡೆಯುತ್ತಿದ್ದ ಗಾಡಿಕೊಪ್ಪ ವೃತ್ತದ ಗ್ರಾಮ ಆಡಳಿತ ಅಧಿಕಾರಿ (ವಿಎ) ಜಿ.ಸುರೇಶ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಿವಮೊಗ್ಗದ ಕೃಷಿ ನಗರದ ಎಂ.ಬಿ.ಸಂಕೇತ್ ಅವರು ಶ್ರೀರಾಮಪುರದ ಎಂ.ಆಶಾ ಅವರಿಂದ 17.5 ಗುಂಟೆ ಜಮೀನು ಖರೀದಿಸಿದ್ದರು. ಅದನ್ನು ತಮ್ಮ ತಾಯಿ ಬಿ.ಎಂ.ವೀಣಾ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಈ ಜಮೀನನ್ನು ಖಾತೆ ಮಾಡಿಸಿಕೊಡಲು ಸಂಕೇತ್‌ ಗಾಡಿಕೊಪ್ಪ ವೃತ್ತದ ವಿಎ ಜಿ.ಸುರೇಶ್ ಅವರ ಬಳಿ ಕೇಳಿದ್ದರು. ಅದಕ್ಕೆ ಸುರೇಶ್ ₹ 6,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಕೇತ್ ಶಿವಮೊಗ್ಗದ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಗಾಡಿಕೊಪ್ಪದ ತಮ್ಮ ಕಚೇರಿಯಲ್ಲಿ ಸುರೇಶ್ ಗುರುವಾರ ಮಧ್ಯಾಹ್ನ ದೂರುದಾರರಿಂದ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ಅವರ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.