ಸಾಗರ: ಪ್ರಾಣಿ ಜನನ ನಿಯಂತ್ರಣ ನಿಯಮ-2001ರ ಉಪಬಂಧಗಳನ್ನು ಸ್ಥಳೀಯ ಆಡಳಿತ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಾಣಿ ಜನನ ನಿಯಂತ್ರಣದ ನಿಯಮದ ಪ್ರಕಾರ ನಾಯಿಗಳ ಸಂಖ್ಯೆಯನ್ನು ನಿಯಮಿತವಾಗಿ ಕಡಿಮೆಗೊಳಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. ಆದರೆ ಈ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವತ್ತ ನಗರಸಭೆ ಆಡಳಿತ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
ನಿಯಮಗಳ ಅನುಷ್ಠಾನ ಸಂಬಂಧ ನಗರಸಭೆ ನಾಗರಿಕರ ಸಮಿತಿಯೊಂದನ್ನು ರಚಿಸಬೇಕು. ಆ ಸಮಿತಿ ನೀಡುವ ಸಲಹೆ, ಸೂಚನೆಗಳ ಪ್ರಕಾರ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಮುಖಂಡರು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಕೆ.ಎಚ್.ಸುದರ್ಶನ, ಆರ್.ಎಸ್.ಗಿರಿ, ಎಲ್.ವಿ.ಅಕ್ಷರ, ಕೃಷ್ಣಮೂರ್ತಿ, ಉಮೇಶ್, ಶ್ರೀಧರ ವರದಾಮೂಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.