ADVERTISEMENT

ಕುಂಸಿ | ಕಂದಕದಲ್ಲಿ ಬಿದ್ದು ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:14 IST
Last Updated 5 ನವೆಂಬರ್ 2024, 14:14 IST
ಕಂದಕದಲ್ಲಿ ಬಿದ್ದು ಮೃತಪಟ್ಟಿರುವ ಕಾಡಾನೆ
ಕಂದಕದಲ್ಲಿ ಬಿದ್ದು ಮೃತಪಟ್ಟಿರುವ ಕಾಡಾನೆ   

ಕುಂಸಿ: ಸಮೀಪದ ವೀರಗಾರನ ಬೈರಿನಕೊಪ್ಪದ ಕಂದಕದಲ್ಲಿ ಬಿದ್ದು ಕಾಡಾನೆಯೊಂದು ಮೃತಪಟ್ಟಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

30ರಿಂದ 35 ವರ್ಷದ ಗಂಡು ಆನೆ ಕಾಲುಗಳಿಗೆ ತೀವ್ರ ಪೆಟ್ಟಾಗಿ ಎದ್ದು ಹೋಗಲಾರದೇ ಮೃತಪಟ್ಟಿದೆ. ಅದು ಮೃತಪಟ್ಟು ಎರಡು ದಿನಗಳಾಗಿರಬಹುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಪ್ರಸನ್ನಕುಮಾರ್ ಪಟಗಾರ್ ತಿಳಿಸಿದ್ದಾರೆ.

ಕಾಡಾನೆಗಳು ಪುರದಾಳು ಗ್ರಾಮವೂ ಒಳಗೊಂಡಂತೆ ಸುತ್ತಮುತ್ತ ಇರುವ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು.

ADVERTISEMENT

‘ಆದರೆ, ಈ ಭಾಗದಲ್ಲಿ ಆನೆಗಳು ಓಡಾಡಿದ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ’ ಎಂದು ತಿಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ‘ಆನೆ ಸತ್ತಿರುವ ಪ್ರದೇಶದ ಹಿಂಭಾಗದಲ್ಲಿ ತಂತಿ ಬೇಲಿ ಕಂಡುಬಂದಿದೆ. ಈ ತಂತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ. ಮರಣೋತ್ತರ ಪರೀಕ್ಷೆ ನಂತರವೇ ಸಾವಿನ ನಿಖರತೆ ಬಗ್ಗೆ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.