ಶಿವಮೊಗ್ಗ: ದೇಶಕ್ಕಾಗಿ ಜೀವನವನ್ನೇ ಮುಡುಪಾಗಿಡುವಸೈನಿಕರ ಕಲ್ಯಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಪ್ರತಿಯೊಬ್ಬರೂ ಧ್ವಜ ಖರೀದಿ ಮಾಡುವ ಮೂಲಕಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆಅರ್ಥಪೂರ್ಣವಾಗಿಸಬೇಕು ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜ್ ಹೇಳಿದರು.
ಸರ್ಕಾರಿನೌಕರರ ಭವನದಸಮೀಪ ಸೈನಿಕ ಉದ್ಯಾನದಲ್ಲಿಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜ ಚೀಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ಹುತಾತ್ಮರಾದ ಸೈನಿಕರ ಸಮರ್ಪಣೆಯ ದಿನ. ತ್ಯಾಗ ಮತ್ತು ಬಲಿದಾನಗಳಿಂದ ಗಡಿಕಾಯುವ ಯೋಧರಿಗೆ ಎಷ್ಟೇ ನೆರವು ನೀಡಿದರೂ ಅದು ಕಡಿಮೆ.ದೇಶದಲ್ಲಿ ಮೊದಲು ಅನ್ನ ನೀಡುವ ರೈತ ಬಿಟ್ಟರೆ ಸೈನಿಕನೇ ಶ್ರೇಷ್ಠ. ಅದಕ್ಕಾಗಿ ಸೈನಿಕರಿಗೆದೇಶದ ಜನತೆ ಸದಾ ಬೆಂಬಲ ನೀಡುತ್ತಾರೆ.ಧೈರ್ಯ, ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಶ್ಲಾಘಿಸಿದರು.
ಉಪ ವಿಭಾಗಾಧಿಕಾರಿ ಟಿ.ವಿಪ್ರಕಾಶ್ ಮಾತನಾಡಿ, ಬಹುಪಾಲುಸಮಯ ಸೈನ್ಯದಲ್ಲಿ ಕಳೆದು ನಿವೃತ್ತರಾದಯೋಧರು ಸಮಾಜದ ಮುಖ್ಯವಾಹಿನಿಯಲ್ಲಿ ಬಾಳಲು ಹಲವು ತೊಡಕುಗಳಿವೆ. ಸರ್ಕಾರ ಸೈನಿಕ ಕಲ್ಯಾಣದ ಬಗ್ಗೆ ಎಷ್ಟೇ ಭರವಸೆ ನೀಡಿದರೂ, ನಿವೃತ್ತರಾದಸೈನಿಕನಿಗೆ ಒಂದು ನಿವೇಶನ ಪಡೆಯಲುಸಾಧ್ಯವಾಗುತ್ತಿಲ್ಲ. ಸರ್ಕಾರದ ವಸತಿ ಯೋಜನೆಗಳಲ್ಲಿ ನಿವೇಶನ ಕಾಯ್ದಿರಿಸಬೇಕು.ಆದಾಯ ಮಿತಿಯ ನಿಯಮ ಸಡಿಲಗೊಳಿಸುವ ಕಾನೂನು ಜಾರಿಗೊಳಿಸಬೇಕು. ಹೆಚ್ಚಿನ ಆರ್ಥಿಕ ನೆರವು ನೀಡಬೇಕು ಎಂದು ಕೋರಿದರು.
ಹೆಚ್ಚುವರಿಜಿಲ್ಲಾಧಿಕಾರಿ ಜೆ.ಅನುರಾಧ, ಸೈನಿಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಆಯುಕ್ತ ಚಿದಾನಂದ ವಟಾರೆ, ಕರ್ನಲ್ ಡಾ.ರಘುನಾಥ್ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.