ADVERTISEMENT

ತೀರ್ಥಹಳ್ಳಿ: ಬರ ಪರಿಹಾರಕ್ಕೆ ಫ್ರೂಟ್‌ ಐಡಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 15:52 IST
Last Updated 30 ನವೆಂಬರ್ 2023, 15:52 IST

ತೀರ್ಥಹಳ್ಳಿ: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ತಾಲ್ಲೂಕು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾದ ಕಾರಣ ಪರಿಹಾರ ಬಿಡುಗಡೆ ಸಾಧ್ಯತೆ ಇರುತ್ತದೆ. ರೈತರು ಪಹಣಿಯನ್ನು ತಕ್ಷಣ ಫ್ರೂಟ್‌ ತಂತ್ರಾಂಶಕ್ಕೆ ನೋಂದಾಯಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌, ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 71,640 ಭೂ ಹಿಡುವಳಿದಾರರಿದ್ದು, 46,486 ಹಿಡುವಳಿದಾರರು ಸರ್ವೆ ನಂಬರ್‌, ದಾಖಲೆ ಹೊಂದಿದ್ದಾರೆ. ಇಲ್ಲಿಯವರೆಗೂ ಶೇ 64 ರಷ್ಟು ಮಾತ್ರ ರೈತರು ನೋಂದಣಿಯಾಗಿದ್ದು, ಇನ್ನುಳಿದ 25,154 ರೈತರ ಪಹಣಿ ನೋಂದಣಿ ಆಗಿಲ್ಲ. ಸೇರ್ಪಡೆ ಮಾಡಿಕೊಳ್ಳುವವರು ಕಂದಾಯ ಇಲಾಖೆಯ ನಾಡಕಚೇರಿ, ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ, ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ ಸಂಪರ್ಕಿಸಲು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT