ತುಮರಿ: ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ತುಮರಿ ಸಮೀಪದ ಹಲ್ಕೆ-ಮುಪ್ಪಾನೆ ಲಾಂಚ್ ಮಾರ್ಗ ಜುಲೈ 17 ರಿಂದ ಪುನರಾರಂಭವಾಗಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಮುಪ್ಪಾನೆ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಜನರ ಸೇವೆಗೆ ಸಿದ್ಧವಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಈ ಭಾಗದ 3 ಕಡವು ಸೇವೆಗಳು ಪುನರಾರಂಭವಾಗಿವೆ. ಸುರಕ್ಷತೆಯೊಂದಿಗೆ ಪೂರಕ ಕ್ರಮಗಳನ್ನು ಬಂದರು ಇಲಾಖೆ ಕೈಗೊಂಡಿದೆ.
ಲಾಂಚ್ ಸಿಬ್ಬಂದಿಗೆ ವೇತನ ಶೀಘ್ರ: ಶರಾವತಿ ಎಡದಂಡೆಯ ಹೊಳೆಬಾಗಿಲು, ಹಸಿರುಮಕ್ಕಿ, ಮುಪ್ಪಾನೆ ಕಡವು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಆರೆಕಾಲಿಕ ನೌಕರರಿಗೆ 4 ದಿನಗಳಲ್ಲಿ ಬಾಕಿ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಕಡವು ನಿರೀಕ್ಷಕ ಧನೇಂದ್ರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.