ಸಾಗರ: ‘ರಾಮ ಮಂದಿರ ಏಕೆ ಬೇಡ’ ಕೃತಿಯಲ್ಲಿ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪಕ್ಕಾಗಿ ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ ಮೊಕದ್ದಮೆ ದಾಖಲಿಸಿದೆ.
ಭಗವಾನ್ ಅವರು ರಚಿಸಿರುವ ‘ರಾಮ ಮಂದಿರ ಏಕೆ ಬೇಡ’ ಕೃತಿಯಲ್ಲಿ ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಅಂಶಗಳಿವೆ ಎಂದು ಇಕ್ಕೇರಿ ಗ್ರಾಮದ ಸಂಘ ಪರಿವಾರದ ಕಾರ್ಯಕರ್ತ ಮಹಾಬಲೇಶ್ವರ್ ಎಂಬುವವರು ಇಲ್ಲಿನ ನ್ಯಾಯಾಲಯದಲ್ಲಿ ಭಗವಾನ್ ವಿರುದ್ಧ 2019ರಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಗಾಡಿ ಪ್ರಕರಣ ದಾಖಲಿಸಿ ಆ. 30ಕ್ಕೆ ಭಗವಾನ್ ಅವರು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲು ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.