ಶಿವಮೊಗ್ಗ/ ತೀರ್ಥಹಳ್ಳಿ: ಆಗುಂಬೆ ಘಾಟಿಯ 4 ಮತ್ತು 5 ನೇ ತಿರುವಿನಲ್ಲಿ ಮಧ್ಯರಾತ್ರಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ನಡುರಾತ್ರಿ ಆಗುಂಬೆ ಮತ್ತು ಹೆಬ್ರಿ ಪೊಲೀಸರು ವಾಹನಗಳಿಗೆ ಬದಲಿ ಮಾರ್ಗಗಳನ್ನು ಸೂಚಿಸಿ ಸವಾರರಿಗೆ ಸಹಕರಿಸಿದ್ದಾರೆ.
ಮುಂಜಾನೆ ಬಸ್ ಸಾಗಿದ್ದರಿಂದ ತಕ್ಕಮಟ್ಟಿಗಿನ ವಾಹನ ಸಂಚಾರ ಆರಂಭವಾಗಿದೆ. ಭಾರಿ ಮಳೆ ಆಗಮಿಸಿದರೆ ಮತ್ತಷ್ಟು ಗುಡ್ಡ ಜರುಗುವ ಆತಂಕ ಎದುರಾಗಿದೆ.
ಮಳೆ ಬಿರುಸು; ಮೈದುಂಬಿದ ನದಿಗಳು
ಮಳೆಗಾಲದಲ್ಲಿ ಮಳೆ ಬಿರುಸುಗೊಂಡಿದೆ. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ, ವರದಾ, ಕುಮದ್ವತಿ, ತುಂಗಾ, ಭದ್ರಾ ನದಿಗಳು ಮೈದುಂಬಿವೆ.
ಭಾರೀ ಮಳೆಯಿಂದಾಗಿ ಗಾಜನೂರಿನ ತುಂಗಾ, ಲಕ್ಕವಳ್ಳಿಯ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿಹೆಚ್ಚು 26.65 ಸೆಂ.ಮೀ ಮಳೆ ದಾಖಲಾಗಿದೆ. ಹುಲಿಕಲ್ ನಲ್ಲಿ 26.49 ಸೆಂ.ಮೀ, ಸಾವೇಹಕ್ಲು 26.14, ಚಕ್ರಾ 24.33, ಮಾಣಿ 21.43 ಹಾಗೂ ಯಡೂರಿನಲ್ಲಿ 12.9 ಸೆಂ.ಮೀ ಮಳೆ ಸುರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.