ADVERTISEMENT

ಇಂದಿರಾಗಾಂಧಿ ಕಾಲೇಜಿಗೆ ‘ಬಿ’ ಡಬಲ್ ಪ್ಲಸ್ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:52 IST
Last Updated 21 ಅಕ್ಟೋಬರ್ 2024, 14:52 IST

ಸಾಗರ: ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2024ನೇ ಶೈಕ್ಷಣಿಕ ಸಾಲಿಗೆ ನ್ಯಾಕ್ ಸಂಸ್ಥೆಯಿಂದ ಬಿ++ ಮಾನ್ಯತೆ ದೊರಕಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ ಎಚ್. ತಿಳಿಸಿದ್ದಾರೆ.

33 ವರ್ಷಗಳ ಹಿಂದೆ ಪ್ರಾರಂಭವಾದ ಕಾಲೇಜಿನಲ್ಲಿ 3,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿರುವ ಕಾಲೇಜನ್ನು ಗುರುತಿಸಿ ನ್ಯಾಕ್ ಸಂಸ್ಥೆ ವಿಶೇಷ ಮಾನ್ಯತೆ ನೀಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ. ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಈ ಕಾಲೇಜಿಗೆ ವಿದ್ಯಾರ್ಥಿನಿಯರು ದಾಖಲಾಗುತ್ತಿರುವುದು ಕಾಲೇಜಿನಲ್ಲಿ ದೊರಕುತ್ತಿರುವ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ  ಎಂದರು.

ADVERTISEMENT

ಉಪನ್ಯಾಸಕರಾದ ಎಸ್.ಶಿವಾನಂದ ಭಟ್, ಮಹಾವೀರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮೂಕಪ್ಪನಾಯ್ಕ, ಮಧುಮಾಲತಿ, ಎನ್.ಉಷಾ, ಎಲ್.ಚಂದ್ರಪ್ಪ, ರಂಜನ್ ಶೆಟ್ಟಿ, ವೈ.ವಿ.ಗೋಪಾಲಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.